ಬೀದರ್ : ಬಾಲಕನ ತಲೆಗೆ ಏರ್ ಗನ್ ಇಟ್ಟು ಮನೆಯವರನ್ನು ಹೆದರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದ ಖತರ್ನಾಕ್ ಖದೀಮರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.
ಏಫ್ರಿಲ್ 26 ರಂದು ಬೀದರ್‌ನ ಓಲ್ಡ್ ಆದರ್ಶ ಕಾಲೋನಿಯಲ್ಲಿರುವ ಡಿಡಿಎಲ್‌ಆರ್ ಸೂಪರಿಟೆಂಡೆಂಟ್ ಆಗಿರುವ ಜ್ಯೋತಿಲತಾ ಎಂಬುವರ ಮನೆಗೆ ಅಂದು ಬೆಳ್ಳಂಬೆಳಗ್ಗೆ ನುಗ್ಗಿದ್ದ 5 ಜನ ಮುಸುಕುದಾರಿಗಳು ಬಾಲಕನ ತಲೆಗೆ ಏರ್ ಗನ್ ಹಿಡಿದು ಮಾರಕಾಸ್ತ್ರಗಳಿಂದ ಕುಟುಂಬಸ್ಥರನ್ನ ಬೆದರಿಸಿದ್ರು. ಬಳಿಕ 280 ಗ್ರಾಮ ನಷ್ಟು ಚಿನ್ನಾಭರಣಗಳನ್ನು ಡಕಾಯಿತಿ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು ಖಚಿತ ಸುಳಿವು ಆಧರಿಸಿ, ಖದೀಮರ ಬಂಧನಕ್ಕೆ ತೆರಳಿದ್ದಾರೆ.
2 ಲಕ್ಷ ಹಣದ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ ವ್ಯಕ್ತಿ
ಈ ವೇಳೆ ಕರ್ತಾರ್ ಸಿಂಗ್ ತನ್ನ ಬಳಿಯಿದ್ದ ಹರಿತವಾದ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹೆಡ್ ಕಾನ್‌ಸ್ಟೆಬಲ್ ಮನ್ಸೂದ್ ಅವರ ಭುಜಕ್ಕೆ ಗಂಭೀರ ಗಾಯವಾಗಿ ಕುಸಿದು ಬಿದ್ದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಗ್ರಾಮೀಣ ಠಾಣೆಯ ಸಿಪಿಐ ಜಿ.ಎಸ್. ಬಿರಾದಾರ ಅವರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಒಂದು ಗುಂಡು ಕರ್ತಾರ್ ಸಿಂಗ್ ಬಲಗಾಲಿಗೆ ತಗುಲಿ ಗಾಯಗೊಂಡಿದ್ದಾನೆ. ಪೊಲೀಸರು ಆತನನ್ನು ಅಲ್ಲೇ ವಶಕ್ಕೆ ಪಡೆದ್ದಾರೆಂದು ಎಸ್ ಪಿ ಪ್ರದೀಪ್ ಗುಂಟಿ ಮಾಹಿತಿ..
ಪೊಲೀಸರ ಮೇಲೆ ಹಲ್ಲೆ ಮಾಡಿ ಖದಿಮರು ಹೊನ್ನಿಕೇರಿ ಅರಣ್ಯ ಪ್ರದೇಶದೊಳಗಿನಿಂದ ಪರಾರಿಯಾಗಲು ಯತ್ನಿಸಿದ ಜಗಜೀತ್ ಸಿಂಗ್ ಹಾಗೂ ಕರ್ತಾರ್ ಸಿಂಗ್ ಹಿಡಿದಿದ್ದಾರೆ. ಬಳಿಕ ಇವರ ಮಾಹಿತಿ ಆಧರಿಸಿ ಚಿನ್ನಾಭರಣ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಬಳಿಕ ಬ್ರಿಮ್ಸ್‌ಗೆ ಭೇಟಿ ನೀಡಿ ಹೆಡ್ ಕಾನ್‌ಸ್ಟೆಬಲ್ ಮಕ್ಸೂದ್ ಗೆ ಧೈರ್ಯ ತುಂಬಿದರು. ಆರೋಪಿಗಳ ಮಾಹಿತಿ ಪಡೆದರು.