ಯಲಹಂಕ:- ಕೇಂದ್ರ ಅನುಮತಿ ಕೊಟ್ರೆ ಪಾಕ್ ವಿರುದ್ಧ ಯುದ್ಧ ಮಾಡಲು ಸಿದ್ಧ ಎಂಬ ಜಮೀರ್ ಅಹಮ್ಮದ್ ಖಾನ್ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ಕೊಟ್ಟಿದ್ದರು. ಈ ವೇಳೆ ಸಿಎಂ ಪತ್ರಕರ್ತರನ್ನು ಗದರಿದ್ದಾರೆ.
ಕೃಷ್ಣಾ ನ್ಯಾಯಾಧೀಕರಣ ವಿಚಾರವಾಗಿ ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವರು ಒಂದು ಸಭೆ ಕರೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಈ ಸಭೆಯಲ್ಲಿ ಸೇರಲಿವೆ. ಇದರ ಪೂರ್ವಭಾವಿಯಾಗಿ ಸಭೆ ನಡೆಸಿದ್ದೇವೆ. ಸಭೆಯಲ್ಲಿ ನಮ್ಮ ನಿಲುವುಗಳ ಬಗ್ಗೆ ಚರ್ಚೆ ಮಾಡಲಾಗಿದೆ. 2010 ಮತ್ತು 2013 ರ ನಂತರ ನ್ಯಾಯಧೀಕರಣ ವಿಚಾರವಾಗಿ ಯಾವುದೇ ನೋಟಿಫಿಕೇಷನ್ ಆಗಿಲ್ಲ. ಅಣೆಕಟ್ಟು ವಿಚಾರವಾಗಿ ಗೆಜೆಟ್ ನೋಟಿಫಿಕೇಷನ್ ಆಗಬೇಕು. ಆಂದ್ರಪ್ರದೇಶ, ತೆಲಂಗಾಣ ರಾಜ್ಯ ವಿಭಾಗ ಆದ ನಂತರ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ನಮಗೆ ಬೇಕಾದ ಪಾಲು ನಮಗೆ ಬೇಕಲ್ಲಾ. ಈಗಾಗಲೇ ಅನೇಕ ಸಾರಿ ಒತ್ತಾಯ ಮಾಡಿದದ್ದೇವೆ ಎಂದರು.