ಬೆಂಗಳೂರು:- ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ. ಮೇ 4ರಂದು ಮಳೆ ಪ್ರಮಾಣ ತುಸು ಹೆಚ್ಚಿರಲಿದ್ದು, ಮೇ 7 ಮತ್ತು ಮೇ 8ರಂದು ಗುಡುಗು-ಸಿಡಿಲಿನಿಂದ ಕೂಡಿದ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
CSK Vs RCB: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ RCB: ಬೆಂಗಳೂರು ಟೇಬಲ್ ಟಾಪರ್!
ಪೂರ್ವ ಮುಂಗಾರು ನಗರದಲ್ಲಿ ನೀರಿನ ಅಭಾವ ತಗ್ಗಿಸುವುದು ಮಾತ್ರವಲ್ಲದೆ, ತಾಪಮಾನ ಕಡಿಮೆ ಮಾಡುವುದಕ್ಕೂ ಸಹಕಾರಿಯಾಗಿದೆ. ವಾಯುಮಾಲಿನ್ಯ ಗಣನೀಯವಾಗಿ ಕಡಿಮೆಯಾಗುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಮುಂಗಾರು ಮಳೆಯ ನೀರನ್ನು ಸಮರ್ಪಕವಾಗಿ ಹಿಡಿದಿಟ್ಟುಕೊಳ್ಳುವುದಕ್ಕೂ ಅನುಕೂಲವಾಗಲಿದೆ. ಇದರಿಂದ ಬೋರ್‌ವೆಲ್‌ಗಳು ಬಹುಬೇಗ ಮರುಪೂರಣಗೊಳ್ಳುತ್ತವೆ. ವಿದ್ಯುತ್ ಅಭಾವ ನೀಗುತ್ತದೆ. ಎಸಿ, ಫ್ಯಾನ್ ಬಳಕೆ ಕೂಡ ಕಡಿಮೆಯಾಗಲಿದೆ. ಉದ್ಯಾನಗಳಿಗೆ ನೀರಿನ ಅಗತ್ಯ ಕಂಡುಬರುವುದಿಲ್ಲ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ವಾಡಿಕೆ ಪ್ರಕಾರ ಬೆಂಗಳೂರಿನಲ್ಲಿ ಪೂರ್ವ ಮುಂಗಾರಿನ ಮಳೆಯ ಪ್ರಮಾಣ 156 ಮಿ.ಮೀ ಇರುತ್ತದೆ. 2024 ರಲ್ಲಿ ಶೇ. 03 ರಷ್ಟು ಮಳೆಯಾಗಿದೆ. ಈ ವರ್ಷ ಜನವರಿಯಿಂದ ಮೇ 2ರವರೆಗೆ ವಾಡಿಕೆ ಪ್ರಕಾರ 64.3 ಮಿ.ಮೀ ಮಳೆಯಾಗಬೇಕಿತ್ತು. ಈವರೆಗೆ 85.1 ಮಿ.ಮೀ ಮಳೆಯಾಗಿದೆ.