ಬೆಂಗಳೂರು ಗ್ರಾಮಾಂತರ:- ಹುಡುಗಿಯನ್ನ ಪ್ರೀತಿ ಮಾಡಿದಕ್ಕೆ ಯುವಕನನ್ನು ಹಲ್ಲೆಗೈದು ಕೊಲೆ ಮಾಡಿದ ಘಟನೆ ದೇವನಹಳ್ಳಿ ಹೊರವಲಯದ ನೀರುಗುಂಟೆಪಾಳ್ಯದಲ್ಲಿ ಜರುಗಿದೆ. ನೀರುಗುಂಟೆಪಾಳ್ಯದ ಪ್ರೀತಂ ( 19 ) ಕೊಲೆಯಾದ ಯುವಕ.
Gold Rate: ಗೋಲ್ಡ್ ಪ್ರಿಯರ ಗಮನಕ್ಕೆ: ಇಂದಿನ ಗೋಲ್ಡ್ ರೇಟ್ ಎಷ್ಟು ಗೊತ್ತಾ!?
ತನಗಿಂತ 2 ವರ್ಷ ದೊಡ್ಡವಳಾದ ಯುವತಿಯನ್ನ ಯುವಕ ಪ್ರೀತಿ ಮಾಡುತ್ತಿದ್ದ. ಎಂಬಿಬಿಎಸ್ ವ್ಯಾಸಾಂಗ ಮಾಡ್ತಿದ್ದ ಯುವತಿ ಜೊತೆ ಯುವಕ ಪ್ರೀತಿಯಲ್ಲಿದ್ದ. ಪ್ರೀತಿ ವಿಚಾರ ತಿಳಿದು ಎರಡು ಮೂರು ಬಾರಿ ಯುವಕನಿಗೆ ಯುವತಿ ಕುಟುಂಬದವರು ವಾರ್ನಿಂಗ್ ಕೊಟ್ಟಿದ್ದರು.
ವಾರ್ನಿಂಗ್ ಮಾಡಿದ್ರು ಪ್ರೀತಿ ಮುಂದುವರೆಸಿದ್ದ ಹಿನ್ನೆಲೆ ಶುಕ್ರವಾರ ರಾತ್ರಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆಗೈದು ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ಗ್ರಾಮದಲ್ಲಿ ಬಾಡಿ ಬಿಸಾಕಿ ಹೋಗಿದ್ದಾರೆ. ಮೃತ ಯುವಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಯುವತಿಯ ಚಿಕ್ಕಮ್ಮನ ಮಗ ಶ್ರೀಕಾಂತ್ ಮತ್ತು ಸಹಚರರಿಂದ ಈ ಕೃತ್ಯ ನಡೆದಿರುವ ಆರೋಪ ಕೇಳಿ ಬಂದಿದೆ. ಬೆಳೆದು ನಿಂತಿದ್ದ ಮಗನನ್ನ ಕಳೆದುಕೊಂಡ ಯುವಕನ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟಮುಟ್ಟಿದೆ. ಯುವಕನ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ.
ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.