ತುಮಕೂರು:-ತುಮಕೂರಿನ ಕ್ಯಾತಸಂದ್ರ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿಯೊಂದು ನಡುರೋಡಲ್ಲಿ ಹೊತ್ತಿ ಉರಿದಿದ್ದು, ಚಾಲಕ ಗ್ರೇಟ್ ಎಸ್ಕೇಪ್ ಆಗಿರುವ ಘಟನೆ ಜರುಗಿದೆ.
ಡಾಬಸ್ ಪೇಟೆಯಿಂದ ವಸಂತ ನರಸಾಪುರ ಕಡೆಗೆ ಕಾರಿಯು ತೆರಳುತ್ತಿತ್ತು. ಈ ವೇಳೆ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಲಾರಿಯನ್ನು ಬಿಟ್ಟು ಚಾಲಕ ಕೆಳಗೆ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬೆಂಕಿ ಕೆನ್ನಾಲಿಗೆಗೆ ಲಾರಿ ಸುಟ್ಟು ಭಸ್ಮವಾಗಿದೆ.