ಬೆಂಗಳೂರು: ಫಾಜಿಲ್ ಕುಟುಂಬದ ಸಮರ್ಥನೆ ಮಾಡಲು ಹೋಗಿ ಖಾದರ್ ಅವರು ಬೆತ್ತಲಾಗಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಸುಹಾಸ್ ಕೊಲೆಯಲ್ಲಿ ಫಾಜಿಲ್ ಕುಟುಂಬದ ಪಾತ್ರ ಇಲ್ಲ ಎಂಬ ಸ್ಪೀಕರ್ ಹೇಳಿಕೆ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ಫಾಜಿಲ್ ಕುಟುಂಬದ ಸಮರ್ಥನೆ ಮಾಡಲು ಹೋಗಿ ಖಾದರ್ ಅವರು ಬೆತ್ತಲಾಗಿದ್ದಾರೆ.
ಮಗು ಆದ್ಮೇಲೆ Hair Fall ಜಾಸ್ತಿ ಆಗಿದ್ಯಾ!? ಹಾಗಿದ್ರೆ ತಪ್ಪದೇ ಆಹಾರದಲ್ಲಿ ಈ ವಸ್ತು ಸೇರಿಸಿ!
ಕಮಿಷನರ್ ಅವರೇ ಸುದ್ದಿಗೋಷ್ಠಿ ಮಾಡಿ ಫಾಜಿಲ್ ಸಹೋದರ ಆದಿಲ್ ಸುಪಾರಿ ಕೊಟ್ಟ ವಿಚಾರ ಹೇಳಿದ್ದಾರೆ. ಸ್ಪೀಕರ್ ಖಾದರ್ ಅವರಿಗೆ ಮಂಗಳೂರು ಕಮಿಷನರ್ ಅವರೇ ಕಪಾಳಮೋಕ್ಷ ಮಾಡಿದ್ದಾರೆ. ಖಾದರ್ ಈಗ ತಪ್ಪಿತಸ್ಥ ಸ್ಥಾನದಲ್ಲಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಖಾದರ್ ಪ್ರಯತ್ನ ಪಟ್ಟಿದ್ದಾರೆ. ಅವರಿಗೆ ಸತ್ಯ ಏನು ಅಂತ ಗೊತ್ತಿದೆ. ಸರ್ಕಾರವು ಕೂಡಲೇ ಖಾದರ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.