ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ದೇಶದ ಸಿನಿಮಾ ಉಳಿವಿಗಾಗಿ ಹೊಸ ನೀತಿ ಜಾರಿಗೆ ತಂದಿದ್ದಾರೆ. ವಿದೇಶಿ ಸಿನಿಮಾಗಳ ಮೇಲೆ ಶೇಖಡ್ 100ರಷ್ಟು ಸುಂಕ ಘೋಷಿಸಿದ್ದಾರೆ. ಹಾಲಿವುಡ್ ಚಿತ್ರರಂಗವನ್ನು ರಕ್ಷಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಉತ್ತೇಜ ನೀಡಲು ಅಮೆರಿಕಾದ ಹೊರಗಡೆ ತಯಾರಾಗುವ ಚಿತ್ರಗಳ ಮೇಲೆ ಶೇಖಡ 100ರಷ್ಟು ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಟ್ರಂಪ್ ಈ ಘೋಷಣೆ ಸಿನಿಮಾ ಉದ್ಯಮದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ವಿಶ್ವದ ಇತರೆ ದೇಶಗಳಾದ ಭಾರತ, ಚೀನಾ, ಯುರೋಪ್ ನಲ್ಲಿ ತಯಾರಾದ ಸಿನಿಮಾಗಳಲೂ ಅಮೆರಿಕಾದಲ್ಲಿ ದೊಡ್ಡ ಯಶಸ್ಸು ಕಾಣುತ್ತವೆ. ಆದ್ರೆ ಟ್ರಂಪ್ ಹೊಸ ಸುಂಕ ನೀತಿಯಿಂದಾಗಿ ವಿದೇಶಿ ಸಿನಿಮಾಗಳ ಬೆಲೆ ಗಣನೀಯವಾಗಿ ಹೆಚ್ಚಾಗಬಹುದು. ಇದರಿಂದ ಅವುಗಳ ಮಾರುಕಟ್ಟೆ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆಗಳಿವೆ.
ಭಾರತದ ಸಿನಿಮಾಗಳಿಗೆ ಹಾಲಿವುಡ್ನಲ್ಲಿ ಡಿಮ್ಯಾಂಡ್ ಇದ್ದು, 100ರಷ್ಟು ಸುಂಕ ನೀತಿ ಭಾರತೀಯ ಸಿನಿಮಾ ನಿರ್ಮಾಪಕರಿಗೆ ದೊಡ್ಡ ಪೆಟ್ಟು ಕೊಡಬಹುದು. ಅಲ್ಲದೇ ಇದಕ್ಕೆ ಪ್ರತಿಯಾಗಿ ಇತರೆ ದೇಶಗಳು ಹಾಲಿವುಡ್ ಸಿನಿಮಾ ಮೇಲೆ ತಮ್ಮದೇ ಪ್ರತಿ ಸುಂಕ ನೀತಿ ಜಾರಿಗೊಳಿಸದರು ಅಚ್ಚರಿಪಡುವಂತಿಲ್ಲ.