ಬೆಂಗಳೂರು: ಜಾತಿ ಗಣತಿ ವರದಿ ಬಂದ ನಂತರವೂ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಗೊಂದಲ ಮುಂದುವರೆದಿದೆ. ಹೀಗಾಗಿ ಕೊರಚ-ಕೊರಮ-ಆದಿ ದ್ರಾವಿಡ ಸೇರಿದಂತೆ 101 ಉಪ ಜಾತಿಗಳು ಪರಿಶಿಷ್ಟ ಜಾತಿ ವರ್ಗದಲ್ಲಿ ಸೇರಿವೆ. ಇವುಗಳಲ್ಲಿ ಉಪ ಜಾತಿಗಳ ವರ್ಗೀಕರಣ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರ ಮರು ಸಮೀಕ್ಷೆ ಅಥವಾ ಸಮಗ್ರ ಸಮೀಕ್ಷೆ (ಎಂಪರಿಕಲ್ ಡಾಟಾ ಸಂಗ್ರಹ)ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ,ಇವತ್ತಿನಿಂದ ಮೇ.17ವರೆಗೆ ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿಗಳ ಮರು ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಅಧ್ಯಕ್ಷತೆಯ ಆಯೋಗ ವರದಿ ನೀಡಿದ್ದರೂ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಸಾಧ್ಯವಾಗಿಲ್ಲ. ಆರ್ಟಿಕಲ್ 341 ರ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಎಡ- ಬಲ , ಭೋವಿ , ಲಮಾಣಿ, ಕೊರಮ , ಕೊರಚ ಇತರೆ ಜಾತಿಗಳು ಬರುತ್ತವೆ. 101 ಜಾತಿಗಳಲ್ಲಿ ಎಂಫೆರಿಕಲ್ ಡಾಟ ಇಲ್ಲ. ಸುಪ್ರೀಂಕೋರ್ಟ್ ಕೂಡ ಒಳ ಮೀಸಲಾತಿ ಕಲ್ಪಿಸಲು ಎಂಫೆರಿಕಲ್ ಡಾಟಾ ಇರಲೇಬೇಕು ಅಂತಾ ಹೇಳಿದೆ. ಹೀಗಾಗಿ 101 ಜಾತಿಗಳ ಮರು ಸಮೀಕ್ಷೆ ನಡೆಸಲಾಗುವುದು ಎಂದರು.
ನೀಟ್ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣ: ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ FIR
ಎಡಗೈ-ಬಲ ಗೈ ಗೊಂದಲ: ಪರಿಶಿಷ್ಟ ಜಾತಿಗಳಲ್ಲಿ ಎಡ-ಗೈ-ಬಲಗೈ ಗೊಂದಲ ಮೊದಲಿನಿಂದಲೂ ಇದೆ. ಕೆಲವರು ಆದಿ ಕರ್ನಾಟಕ, ಆದಿ ದ್ರಾವಿಣ, ಆದಿ ದ್ರಾವಿಡ ಎಂದು ಸಮೀಕೆ ವೇಳೆ ಬರೆಸಿದ್ದಾರೆ. ಎಡಗೈನವರು, ಬಲಗೈನವರು ಬರೆದುಕೊಂಡಿರ್ತಾರೆ. ಅವರು ನಿರ್ದಿಷ್ಟವಾಗಿ ಎಡಗೈ, ಬಲಗೈ ಅಂತಾ ಗೊತ್ತಾಗಲ್ಲ. ಆದಿ ದ್ರಾವಿಡ, ಎಡಗೈ ಬಲಗೈ ಅಂತಾ ಇಬ್ಬರು ಕರೆದುಕೊಳ್ತಾರೆ. ಆದಿ ಕರ್ನಾಟಕ, ಆದಿ ಆಂಧ್ರದವರು ಅದೇ ತರ ಕರೆದುಕೊಳ್ತಾರೆ. ನಿಖರವಾಗಿ ಯಾರು ಎಷ್ಟು ಜನಸಂಖ್ಯೆ ಇದ್ದಾರೆ ಅನ್ನೋದು ಗೊತ್ತಾಗಲ್ಲ
101 ಜಾತಿಗಳಲ್ಲಿ ಒಳ ಮೀಸಲಾತಿ ಕೊಡಬಹುಕಾದ್ರೆ, ನಿರ್ದಿಷ್ಟವಾದ ಅಂಕಿ ಅಂಶ ಬೇಕಾಗುತ್ತೆ. ಅದಕ್ಕಾಗಿ ನಾಗಮೋಹನ್ ದಾಸ್ ಆಯೋಗ ಮತ್ತೊಮ್ಮೆ,ಇವತ್ತಿನಿಂದ 17 ನೇ ತಾರೀಕಿನವರೆಗೆ 0ಮನೆಮನೆಗೆ ಹೋಗಿ ಎಂಫಿರಿಕಲ್ ಡಾಲಾ ಕಲೆಕ್ಟ್ ಮಾಡಲಿದೆ. ಸುಮಾರು 65 ಸಾವಿರ ಶಿಕ್ಷಕರನ್ನು ಸಮೀಕ್ಷೆಗೆ ನೇಮಕ ಮಾಡಲಾಗಿದೆ. 10-12 ಜನ ಶಿಕ್ಷಕರಿಗೆ ಒಬ್ಬ ಮೇಲ್ವಿಚಾರಕರು ಇರ್ತಾರೆ. ಮನೆ ಮನೆಗೆ ಹೋಗೋದ್ರ ಜೊತೆಗೆ ಅವರು ಮೊದಲನೆ ಹಂತದಲ್ಲಿ 5-5- 2025 ರಿಂದ 17-5- 2025 ರವರೆಗೆ ಸಮೀಕ್ಷೆ ನಡೆಯುತ್ತೆ. ಮೇ.19ರಿಂದ ಮೇ.23ರವರೆಗೆ 3ನೇ ಹಂತದಲ್ಲಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ವಿಶೇಷ ಶಿಭಿರಗಳನ್ನು ನಡೆಸಿ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ
ಮೂರನೆ ಹಂತದಲ್ಲಿ ಆನ್ ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬಹುದು. ಈ ಮೂರು ಸರ್ವೆಗಳ ಮೂಲಕ ನಿಖರವಾದ ಮಾಹಿತಿ ಪಡೆದ ಮೇಲೆ ಮತ್ತೊಮ್ಮೆ ನಾಗಮೋಹನ್ ದಾಸ ಸಮಿತಿ 60 ದಿನಗಳಲ್ಲಿ ವರದಿ ಕೊಡಲು ಸೂಚಿಸಲಾಗಿದೆ. ಈ ಸಮೀಕ್ಷೆಗೆ ಮೊಬೈಲ್ ಆಫ್ ಮೂಲಕ ಆರಂಭಿಸಲಾಗಿದೆ. ಬೆಳಿಗ್ಗೆ 6.30 ರಿಂದ ಸಂಜೆ 6.30 ರವರೆಗೆ ಅವಕಾಶ ಮಡಿಕೊಡಲಾಗಿದೆ. ಶಿಕ್ಷಕರು ಸಮೀಕ್ಷೆಗೆ ಮನೆ ಮನೆಗೆ ಹೋದಾಗ ಯಾವ ಮೂಲ , ಯಾವ ಜಾತಿಗೆ ಸೇರಿದ್ದೀವಿ ಅನ್ನೋದು ಹೇಳಬೇಕು. ಮನೆಗೆ ಹೋದಾಗ ಮಾಹಿತಿ ಕೊಡಲು ಸಾಧ್ಯವಾಗದಿದ್ರೆ ಸ್ವಯಂಪ್ರೇರಿತರಾಗಿ ಬಂದು ಮಾಹಿತಿ ಕೊಡಬಹುದು ಎಂದು ಸಿದ್ದರಾಮಯ್ಯ ವಿವರ ನೀಡಿದ್ದಾರೆ.
100 ಕೋಟಿ ವೆಚ್ಚ: 101 ಪರಿಶಿಷ್ಟ ಜಾತಿಗಳ ಮರು ಸಮೀಕ್ಷೆಗೆ ರಾಜ್ಯ ಸರ್ಕಾರ 100 ಕೋಟಿ ಖರ್ಚು ಮಾಡಲಿದೆ. ಇದು ಪರಿಶಿಷ್ಟ ಜಾತಿಗಳ ಸರ್ವೆ ಅಷ್ಟೇ. ಕಾಂತರಾಜು ವರದಿಗು ಇದಕ್ಕೂ ಸಂಭಂದ ಇಲ್ಲ. ಈ ಸರ್ವೆಗೆ ಅಂದಾಜು 100 ಕೋಟಿ ವರೆಗೆ ಹಣ ಖರ್ಚಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.