ಪವರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರ ಉಪಮುಖ್ಯಮಂತ್ರಿ ಗದ್ದುಗೇರಿದ ಮೇಲೆ ಅವರು ನಟಿಸುತ್ತಿದ್ದ ಸಿನಿಮಾಗಳ ಚಿತ್ರೀಕರಣ ಬಾಕಿ ಉಳಿದಿತ್ತು. ಪವರ್ ಸ್ಟಾರ್ ಮತ್ತೆ ಬಣ್ಣ ಹಚ್ಚೋದು ಯಾವಾಗ? ಅವರನ್ನು ತೆರೆಮೇಲೆ ನೋಡುವುದು ಯಾವಾಗ? ಎಂದು ಕಾಯುತ್ತಿದ್ದ ಅಭಿಮಾನಿಗಳೀಗ ಗುಡ್ ನ್ಯೂಸ್ ಸಿಕ್ಕಿದೆ. ರಾಜಕೀಯಕ್ಕೆ ಸಣ್ಣದೊಂದು ವಿರಾಮ ಕೊಟ್ಟು ನಿನ್ನೆಯಿಂದ ಶೂಟಿಂಗ್ ಅಖಾಡಕ್ಕೆ ಪವನ್ ಕಲ್ಯಾಣ್ ಎಂಟ್ರಿ ಕೊಟ್ಟಿದ್ದಾರೆ.
ಕ್ರಿಶ್ ಜಗರ್ಲಮುಡಿ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವ ಹರಿ ಹರ ವೀರ ಮಲ್ಲು ಚಿತ್ರದ ಚಿತ್ರೀಕರಣಕ್ಕೆ ಪವನ್ ಕಲ್ಯಾಣ್ ಹಾಜರಾಗಿದ್ದಾರೆ. ನಾಲ್ಕು ದಿನ ಮಾತ್ರ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರದ ಒಂದು ಹಾಡು ಹಾಗೂ ಕೆಲ ದೃಶ್ಯಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು, ಆ ಚಿತ್ರೀಕರಣವನ್ನು ಈಗ ನಡೆಸಲಾಗುತ್ತಿದೆ.
ಹರಿ ಹರವೀರ ಮಲ್ಲು ಮಾತ್ರವಲ್ಲದೇ ಪವನ್ ಕಲ್ಯಾಣ್ ನಟಿಸಲಿರುವ ಒಜಿ ಚಿತ್ರದ ಶೂಟಿಂಗ್ ಕೂಡ ಶೀಘ್ರದಲ್ಲೇ ನಡೆಯಲಿದೆಯಂತೆ. ಪವನ್ ಒಪ್ಪಿಕೊಂಡಿದ್ದ ಉಸ್ತಾದ್ ಭಗಂತ್ ಸಿಂಗ್ ಚಿತ್ರವನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹರಿ ಹರ ವೀರ ಮಲ್ಲು ಹಾಗೂ ಒಜಿ ಚಿತ್ರಗಳ ಮೂಲಕ ಪವರ್ ಸ್ಟಾರ್ ಮತ್ತೊಮ್ಮೆ ಬೆಳ್ಳಿತೆರೆಗೆ ಬರಲಿದ್ದಾರೆ.