ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಆರೋಗ್ಯ ರಕ್ಷಣಾ ಪರಿಹಾರ ಸಂಸ್ಥೆ ಜೀರೆ ಕಾರ್ಡಿಯೋಡಿಜಿ ಪರಿಚಯಿಸಿದ ವಿಶಿಷ್ಟ ಮತ್ತು ನವೀನ ಹೃದಾಲ್ ಮೊಬೈಲ್ ಆಪ್, ಉತ್ತಮ ತುರ್ತು ಪ್ರವೇಶ, ರೋಗನಿರ್ಣಯ ಮತ್ತು ತಡೆಗಟ್ಟುವ ಆರೈಕೆಯ ಮೂಲಕ ಅನಾರೋಗ್ಯ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಭಾರತದಲ್ಲಿ ಆರೋಗ್ಯ ಫಲಿತಾಂಶಗಳನ್ನು ಸುಧಾರಿಸಲು ಮುಂದಾಗಿದೆ.
2024 ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಜೀರೆ ಕಾರ್ಡಿಯೋಡಿಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ನಾವೀನ್ಯತೆಯನ್ನು ಆನ್-ಗ್ರೌಂಡ್ ಬೆಂಬಲದೊಂದಿಗೆ ಸಂಯೋಜಿಸುವ ಮೂಲಕ ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.
Red Blood Cells: ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸಿ!
ಆಪ್ನಲ್ಲಿ “ಆನ್ಲೈನ್ ಮತ್ತು ಆಫ್ಲೈನ್ ಎರಡೂ ಉಪಸ್ಥಿತಿಯೊಂದಿಗೆ, ಆರೋಗ್ಯ ರಕ್ಷಣಾ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ ಮತ್ತು ಎಲ್ಲೆಡೆ ಎಲ್ಲರಿಗೂ ಪ್ರವೇಶಿಸಬಹುದಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಮರ್ಪಿತರಾಗಿದ್ದೇವೆ. ತಂತ್ರಜ್ಞಾನ ಮತ್ತು ನಾವೀನ್ಯತೆಯ ಮೂಲಕ ರೋಗನಿರ್ಣಯದ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ, ”ಎಂದು ಜೀರೆ ಕಾರ್ಡಿಯೋಡಿಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ಎಂಡಿ ಮತ್ತು ಸಿಇಒ ಡಾ. ಡೇವಿಡ್ ಜೆ ಚೆಲ್ಲಿ, ಅಪ್ಲಿಕೇಶನ್ಗೆ ಚಾಲನೆ ನೀಡಿದ ನಂತರ ಹೇಳಿದ್ದಾರೆ.
ಒತ್ತಡ, ಜೀವನಶೈಲಿ ಮತ್ತು ಕಡಿಮೆ ಆರೋಗ್ಯ ಜಾಗೃತಿಯಿಂದಾಗಿ ಹೃದಯ ಕಾಯಿಲೆಗಳು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿರುವಂತೆ, ಪೂರ್ವಭಾವಿ, ಸಂಪರ್ಕಿತ ಮತ್ತು ಕೈಗೆಟುಕುವ ಆರೋಗ್ಯ ಸೇವೆಯ ಅಗತ್ಯವು ಬೆಳೆದಿದೆ. ಭಾರತದಲ್ಲಿ ಪ್ರಾಥಮಿಕ ಆರೈಕೆಯಿಂದ ತೃತೀಯ ಆರೈಕೆಯವರೆಗೆ ವ್ಯಾಪಕ ಶ್ರೇಣಿಯ ಆರೋಗ್ಯ ಸೇವೆಗಳು ಲಭ್ಯವಿದ್ದರೂ, ರೋಗಿಗಳಿಗೆ ಅಗತ್ಯವಿರುವ ಸೇವೆಗಳ ನಡುವೆ ಆಗಾಗ್ಗೆ ಸಂಪರ್ಕ ಖಡಿತಗೊಳ್ಳುತ್ತದೆ. ಮಾಹಿತಿಯ ಕೊರತೆ ಅಥವಾ ಅಸಮರ್ಪಕ ಸಾರಿಗೆ ಸಂಪರ್ಕ ಖಡಿತಕ್ಕೆ ಕೆಲವು ಕಾರಣಗಳಾಗಿರಬಹುದು ಎಂದು ಹೇಳಿದ್ದಾರೆ.
“ನಮ್ಮ ಪ್ರಮುಖ ಡಿಜಿಟಲ್ ಪ್ಲಾಟ್ಫಾರ್ಮ್, ಹೃದಾಲ್, ಆರೋಗ್ಯ ಸೇವೆಯನ್ನು ಹೆಚ್ಚು ಸುಲಭ ಸಾಧ್ಯವಾಗಬಹುದಾದ ಕೈಗೆಟುಕುವ ಮತ್ತು ಸಕಾಲಿಕವಾಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದು ಭಾರತದ ಎಲ್ಲಾ 800 ಜಿಲ್ಲೆಗಳನ್ನು ಒಳಗೊಂಡಂತೆ ಒಂದೇ ವೇದಿಕೆಯಡಿಯಲ್ಲಿ 15 ಆರೋಗ್ಯ ರಕ್ಷಣಾ ಪೂರೈಕೆದಾರ ಘಟಕಗಳನ್ನು ಹೊಂದಿರುವ ಮೊದಲ ಮೊಬೈಲ್ ಅಪ್ಲಿಕೇಶನ್ ಆಗಿರುತ್ತದೆ“ ಎಂದು ಡಾ. ಚೆಲ್ಲಿ ಹೇಳಿದರು.
ಈ ಆಲ್-ಇನ್-ಒನ್ ಮೊಬೈಲ್ ಅಪ್ಲಿಕೇಶನ್ ಮೂಲಕ, ಬಳಕೆದಾರರು ತುರ್ತು ಸೇವೆಗಳನ್ನು ಪ್ರವೇಶಿಸಬಹುದು – ನಿರ್ಣಾಯಕ ಸಂದರ್ಭಗಳಿಗೆ 24/7 ಆಂಬ್ಯುಲನ್ಸ್ ಸೇವೆ ಮನೆ ಬಾಗಿಲಿಗೆ ಔಷಧಿಗಳನ್ನು ಆರ್ಡರ್ ಮಾಡುವುದು, ಮನೆಯಲ್ಲಿ ರೋಗನಿರ್ಣಯ ಸೇವೆಗಳನ್ನು (ಲ್ಯಾಬ್ ತಂತ್ರಜ್ಞರು) ಬುಕ್ ಮಾಡುವುದು, ಮನೆಯಲ್ಲಿ ಚಿಕಿತ್ಸೆ ಮತ್ತು ವ್ಯವಸ್ಥೆಯನ್ನು ನಿಗದಿಪಡಿಸುವುದು, ನೀಡಲಾಗುವ ಸೇವೆಗಳು ಮತ್ತು ಅಂದಾಜು ವೆಚ್ಚಗಳು ಸೇರಿದಂತೆ ವಿವರವಾದ ಡೈರೆಕ್ಟರಿಗಳ ಸಹಾಯದಿಂದ ಪರಿಶೀಲಿಸಿದ ವೈದ್ಯರು ಮತ್ತು ಆಸ್ಪತ್ರೆಗಳನ್ನು ಹುಡುಕುವುದು. ಈ ಅಪ್ಲಿಕೇಶನ್ ಬಳಕೆದಾರರಿಗೆ ರಿಯಾಯಿತಿಗಳು ಮತ್ತು ಪಾರದರ್ಶಕ ಬೆಲೆಗಳನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಉತ್ತಮ ನಿರ್ಧಾರ ತೆಗೆದುಕೊಳ್ಳುವಿಕೆಗಾಗಿ ವೆಚ್ಚದ ಅರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಬೆಂಗಳೂರು ಗ್ರಾಮೀಣ ಸಂಸತ್ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಹೇಳಿದರು, “ಆರೋಗ್ಯ ವೃತ್ತಿಪರರು, ನವೋದ್ಯಮಗಳು ಮತ್ತು ಸರ್ಕಾರದೊಂದಿಗೆ, ಸಂಸ್ಥೆಯು ಆರೋಗ್ಯಕರ ಭಾರತವನ್ನು ರೂಪಿಸಲು ನೋಡುತ್ತಿದೆ – ಒಂದೊಂದೇ ಸಂಪರ್ಕ. ಇದು ದೇಶದಲ್ಲಿ ವೈದ್ಯಕೀಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ಒಂದು ಉತ್ತಮ ಉಪಕ್ರಮವಾಗಿದೆ.”
6 ವರ್ಗದ ಗ್ರಾಹಕರನ್ನು (ಸಾರ್ವಜನಿಕರು, ರೋಗಿಗಳು, ವೈದ್ಯರು ಮತ್ತು ವೈದ್ಯಕೀಯ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್ಗಳ ವಿದ್ಯಾರ್ಥಿಗಳು) ಗುರಿಯಾಗಿಟ್ಟುಕೊಂಡು ಮೌಲ್ಯವರ್ಧಿತ ಕಾರ್ಯಕ್ರಮಗಳು ಸಹ ಒಳಗೊಂಡಿರುತ್ತವೆ.
ಸಾರ್ವಜನಿಕರು ಉಚಿತವಾಗಿ ಆರೋಗ್ಯ ಮಾಹಿತಿ ಮತ್ತು ಮಾರ್ಗದರ್ಶನವನ್ನು ಪಡೆಯುವುದರ ಜೊತೆಗೆ ಆರೋಗ್ಯದಲ್ಲಿ ನಿಯಮಿತ ನವೀಕರಣಗಳನ್ನು ಕಾಣಬಹುದಾಗಿರುತ್ತದೆ. ತುರ್ತು ಸಮಯದಲ್ಲಿ ಮತ್ತು ಇತರ ಸಮಯಗಳಲ್ಲಿ ಮೀಸಲಾದ ಮಾರ್ಗದರ್ಶನವನ್ನು ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆಯಬಹುದಾಗಿದೆ.
ರೋಗಿಗಳಿಗೆ ಮೇಲಿನ ಸೌಲಭ್ಯಗಳ ಜೊತೆಗೆ ತನ್ನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲು ಇಎಂಆರ್ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ ಮತ್ತು ವಿಸಿ ಮೂಲಕ ಅಭಿಪ್ರಾಯಕ್ಕಾಗಿ ಜಗತ್ತಿನ ಯಾವುದೇ ವೈದ್ಯರೊಂದಿಗೆ ಸಂಪರ್ಕ ಸಾಧಿಸಬಹುದಾಗಿರುತ್ತದೆ.
ವೈದ್ಯರು: ಅವರು ಎಲ್ಲಾ ಜರ್ನಲ್ಗಳು ಮತ್ತು ಪಠ್ಯ ಪುಸ್ತಕಗಳಿಗಾಗಿ ನಮ್ಮ ಇ-ಲೈಬ್ರರಿಗೆ ಪ್ರವೇಶವನ್ನು ಪಡೆಯುತ್ತಾರೆ. ಕ್ಷೇತ್ರದ ಪ್ರಮುಖರಿಂದ ನಿಯಮಿತ ಮತ್ತು ಮಾನ್ಯತೆ ಪಡೆದ ನಿರಂತರ ಔಷಧ ಶಿಕ್ಷಣ (ಅಒಇ) ಇರುತ್ತದೆ. ಉದ್ಯೋಗ ಖಾಲಿ ಹುದ್ದೆಗಳಲ್ಲಿಯೂ ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು (ವೈದ್ಯಕೀಯ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್) ಇವರಿಗೆ ನಾವು ನಿಯಮಿತ ತರಬೇತಿ ತರಗತಿಗಳನ್ನು (ನೇರ ಮತ್ತು ರೆಕಾರ್ಡ್) ನಡೆಸುತ್ತೇವೆ.
ಜೀರೆ ಕಾರ್ಡಿಯೋಡಿಜಿ ಸಲ್ಯೂಷನ್ಸ್ ಪ್ರೈ. ಲಿಮಿಟೆಡ್ ಬಗ್ಗೆ
ಇದು ಪ್ರವರ್ತಕರು ಮತ್ತು ನಿರ್ದೇಶಕರು ಸೇರಿದಂತೆ ಕಲಿತ ಮತ್ತು ಹೆಸರಾಂತ ವೃತ್ತಿಪರರಿಂದ ರಚಿಸಲ್ಪಟ್ಟ ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ. ಈ ಯೋಜನೆಯ ಹಿಂದಿನ ಮುಖ್ಯ ಉದ್ದೇಶ 30 ವರ್ಷಗಳಿಗೂ ಹೆಚ್ಚು ಕಾಲ ಮೆದಳು ವೈದ್ಯರಾಗಿ ಅನುಭವ ಹೊಂದಿರುವ ಮತ್ತು 15 ವರ್ಷಗಳಿಗೂ ಹೆಚ್ಚು ಕಾಲ ಹೃದ್ರೋಗ ತಜ್ಞರಾಗಿದ್ದು, ಅವರಿಗೆ ಅವರ ಆಪ್ತ ಸ್ನೇಹಿತರು ಸಕ್ರಿಯವಾಗಿ ಬೆಂಬಲ ನೀಡಿದ್ದಾರೆ, ಅವರಲ್ಲಿ ಒಬ್ಬರು 25 ವರ್ಷಗಳಿಗೂ ಹೆಚ್ಚು ಕಾಲ ಐಟಿ ಉದ್ಯಮದಲ್ಲಿ, ಒಬ್ಬರು 20 ವರ್ಷಗಳಿಗೂ ಹೆಚ್ಚು ಕಾಲ ಔಷಧೀಯ ಉದ್ಯಮದಲ್ಲಿ, ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ಗಳು ಮತ್ತು ಒಬ್ಬರು ಸಾಮಾಜಿಕ ಸೇವೆಯಲ್ಲಿದ್ದಾರೆ. ಈ ನಿರ್ದಿಷ್ಟ ಯೋಜನೆಯನ್ನು ಸಮಾಜಕ್ಕೆ ಸೇವೆಯಾಗಿ ತೆಗೆದುಕೊಳ್ಳಲಾಗಿದೆ ಮತ್ತು ಇದು ಎಲ್ಲರಿಗೂ ಸೂಕ್ತವಾದ ಲಭ್ಯವಿರುವ ಆರೋಗ್ಯ ರಕ್ಷಣಾ ಸಂಪನ್ಮೂಲಗಳ ದೃಷ್ಟಿಕೋನ ಮತ್ತು ಬಳಕೆಯಲ್ಲಿ ಬದಲಾವಣೆಗಳನ್ನು ತರುತ್ತದೆ ಎಂದು ಆಶಿಸಲಾಗುತ್ತಿದೆ.