ಬೀದರ್: ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕೊಲೆ ಸುಲಿಗೆ ನಿರಂತರವಾಗಿದೆ. ಯಾವುದನ್ನು ತಡೆಯುವ ಶಕ್ತಿ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲ. ಹೀಗಾಗಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯೊಲ್ಲಾ ಅನ್ನೊದು ಗ್ಯಾರಂಟಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮುಂದಿನ ದಿನ ರಾಜ್ಯದ ಜನತೆ ಕಾಂಗ್ರೆಸ್ಗೆ ತಕ್ಕಪಾಠ ಕಲಿಸುತ್ತಾರೆ. ಸಿಎಂ ಪ್ರಚಾರಕ್ಕಾಗಿ ಜೀವ ಬೆದರಿಕೆ ಇದೆ ಎಂದಿದ್ದಾರೆ. ಸರ್ಕಾರದಲ್ಲಿ ಹಣಕಾಸಿನ ಸ್ಥಿತಿ ಸರಿಯಿಲ್ಲ. ಯಾವುದೇ ಅಭಿವೃದ್ದಿ ಕೆಲಸ ಆಗ್ತಾ ಇಲ್ಲ. ರಾಜ್ಯದಲ್ಲಿ ವಿಚಿತ್ರವಾದ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಅಭಿವೃದ್ದಿಯನ್ನ ಸಂಪೂರ್ಣ ಕಡೆಗಣಿಸಿದೆ. ಮುಂದಿನ ದಿನ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ನಾವೆಲ್ಲ ಪಕ್ಷ ಸಂಘಟನೆ ಮಾಡ್ತೇವೆ ಎಂದು ಬೀದರ್ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಸುಹಾಸ್ ಮೇಲೆ ಗೂಬೆಕೂರಿಸುವ ಕೆಲಸವನ್ನು ಬಿಟ್ಟು, ಸರ್ಕಾರ ಕ್ರಮಕೈಗೊಳ್ಳಬೇಕು: ನಳಿನ್ ಕುಮಾರ್ ಕಟೀಲ್