ಟೀಮ್ ಇಂಡಿಯಾಗೆ ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಗಳಿಸಿರುವ ವಿರಾಟ್ ಕೊಹ್ಲಿ ಲಾಸ್ ಮಾಡಿದ್ರಾ ಎಂಬ ಮಾತುಗಳು ಗುಸು ಗುಸು ಕೇಳಿ ಬರುತ್ತಿದೆ. ಕ್ರಿಕೆಟ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ವಿರಾಟ್ ಮಾಡಿದ್ದೆಲ್ಲಾ ದಾಖಲೆಗಳೆ. ಚೇಸಿಂಗ್ ಮಾಸ್ಟರ್, ದಾಖಲೆಗಳ ಸರದಾರ ಎಂಬೆಲ್ಲಾ ಬಿರುದು ಪಡೆದಿರುವ ವಿರಾಟ್ ಕೊಹ್ಲಿ ಅವರು ಟೀಮ್ ಇಂಡಿಯಾಗೆ ದೊಡ್ಡ ಲಾಸ್ ಒಂದನ್ನು ಮಾಡಿದ್ದಾರೆ. ಅದೇನು ಅಂತ ಹೇಳ್ತೀವಿ ಈ ಸುದ್ದಿ ಪೂರ್ತಿ ಓದಿ
ಟಿ20 ವಿಶ್ವಕಪ್ ಫೈನಲ್ ಮ್ಯಾಚ್. ಸೌತ್ ಆಫ್ರಿಕಾ ಎದುರಿನ ಪಂದ್ಯ.. ಈ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ಟಿ20 ವಿಶ್ವ ಚಾಂಪಿಯನ್ ಆಗಿ ಮೆರೆದಾಡಿತ್ತು. ಗೆದ್ದ ಖುಷಿಯಲ್ಲಿ ತೇಲಾಡುತ್ತಿದ್ದ ಫ್ಯಾನ್ಸ್ಗೆ ಒಂದು ಬರ ಸಿಡಲ ಆಘಾತ ಎದುರಾಗಿತ್ತು. ಅದೇ ಆ ಪಂದ್ಯದ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿಯ ನಿವೃತ್ತಿ. ಮ್ಯಾಚ್ ಗೆಲ್ಲಿಸಿದ್ದ ಕಿಂಗ್ ಕೊಹ್ಲಿ, ಪಂದ್ಯದ ಬಳಿಕ ಸೈಲೆಂಟ್ ಆಗಿಯೇ ನಿವೃತ್ತಿಯ ಶಾಕ್ ನೀಡಿದ್ದರು. ವಯಸ್ಸಾಯ್ತು. ಟಿ20 ಕ್ರಿಕೆಟ್ನಿಂದ ದೂರವಾಗಲು ಇದೇ ಸಮಯ ಅನ್ನೋ ನೆಮ್ಮದಿಯೂ ಒಂದೆಡೆ ಇತ್ತು. ಆದ್ರೀಗ ವಿರಾಟ್, ಟಿ20ಗೆ ಗುಡ್ ಬೈ ಹೇಳಿ ತಪ್ಪು ಮಾಡಿದ್ರಾ ಎಂಬ ಪ್ರಶ್ನೆ ಕಾಡ್ತಿದೆ. ಇದಕ್ಕೆ ಕಾರಣ ಕಿಂಗ್ ಕೊಹ್ಲಿಯ ಆಟ.
ಎಸ್, ಐಪಿಎಲ್ ಸೀಸನ್ 18ರ ಸೀಸನ್ ಕಿಂಗ್ ಕೊಹ್ಲಿಗೆ ಸಮರ್ಪಣೆ ಅನ್ನೋ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿದೆ. ಅಭಿಮಾನಿಗಳ ವಲಯದ ಈ ನಿರೀಕ್ಷೆಯನ್ನ ವಿರಾಟ್ ಹುಸಿಗೊಳಿಸಿಲ್ಲ. ಐಪಿಎಲ್ ಅಖಾಡದಲ್ಲಿ ಕ್ಲಾಸ್ ಆಟದಿಂದಲೇ ಧೂಳೆಬ್ಬಿಸ್ತಿರುವ ಕೊಹ್ಲಿ, ಎದುರಾಳಿಗಳ ಪಾಲಿಗೆ ಅಕ್ಷರಶಃ ಸಿಂಹ ಸ್ವಪ್ನವಾಗಿದ್ದಾರೆ. ಆಡಿದ 11 ಮ್ಯಾಚ್ಗಳ ಪೈಕಿ 4 ಮ್ಯಾಚ್ಗಳಲ್ಲಿ ಬಿಟ್ರೆ, ಉಳಿದ 7 ಮ್ಯಾಚ್ಗಳಲ್ಲಿ ಅರ್ಧಶತಕದ ಗಡಿದಾಟಿದ್ದಾರೆ. ಇದು ಪ್ರಸಕ್ತ ಆವೃತ್ತಿಯಲ್ಲಿ ಆಟಗಾರನೊಬ್ಬ ಸಿಡಿಸಿದ ಗರಿಷ್ಠಅರ್ಧಶತಕಗಳಾಗಿವೆ. ಇದು ವಿರಾಟ್ ಕನ್ಸಿಸ್ಟೆನ್ಸಿ ಆಟಕ್ಕಿಡಿದ ಕೈಗನ್ನಡಿಯೇ ಆಗಿದೆ. ಇಂಟ್ರೆಸ್ಟಿಂಗ್ ಅಂದ್ರೆ, ಕೊಹ್ಲಿ ಅರ್ಧಶತಕ ಸಿಡಿಸಿದ ಪ್ರತಿ ಮ್ಯಾಚ್ನಲ್ಲಿ ಆರ್ಸಿಬಿ ಗೆಲ್ಲುತ್ತಿದೆ. ಇದು ಕೊಹ್ಲಿಯ ಆಟದ ಇಂಪ್ಯಾಕ್ಟ್ ಎಷ್ಟು ಅನ್ನೋದನ್ನೇ ಸಾರಿ ಸಾರಿ ಹೇಳ್ತಿದೆ.
ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರೂ ಚುಟುಕು ಫಾರ್ಮೆಟ್ನಲ್ಲಿ ಕೊಹ್ಲಿಯ ಖದರ್ ಕಡಿಮೆಯಾಗಿಲ್ಲ. ಈ ಸೀಸನ್ನಲ್ಲಿ ಕೊಹ್ಲಿ ಆಟ ನೋಡಿದವರಲ್ಲಿ ಟಿ20ಗೆ ತುಂಬಾ ಬೇಗ ಗುಡ್ ಬೈ ಹೇಳಿ ಬಿಟ್ರಾ ಅನ್ನೋ ಪ್ರಶ್ನೆ ಹುಟ್ಟದೆ ಇರಲ್ಲ. ಪ್ಲೇಯಿಂಗ್ ಕಂಡಿಷನ್ಸ್ನ ಅರ್ಥ ಮಾಡಿಕೊಂಡು ಮ್ಯಾಚ್ ಸಿಚ್ಯುವೇಶನ್ಗೆ ತಕ್ಕಂತೆ ಕೊಹ್ಲಿ ಅಷ್ಟು ಬೊಂಬಾಟ್ ಬ್ಯಾಟಿಂಗ್ ನಡೆಸ್ತಿದ್ದಾರೆ. ಕೊಹ್ಲಿ, 36ರ ವಯಸ್ಸಿನಲ್ಲೂ ಅದೇ ಫಿಟ್ನೆಸ್ ಹೊಂದಿದ್ದಾರೆ. ಟಿ20ಗೆ ಬೇಕಾದ ರಿದಮ್ ಇದೆ. ಇದೆಲ್ಲಾ ಇರುವ ಕೊಹ್ಲಿ, ಮುಂದಿನ ಟಿ20 ತನಕ ವೇಯ್ಟ್ ಮಾಡಿದ್ರೆ ಟೀಮ್ ಇಂಡಿಯಾಗೆ ಲಾಭವಾಗ್ತಿತ್ತು ಅನ್ನೋದು ಸಾಕಷ್ಟು ಮಂದಿಯ ಅಭಿಪ್ರಾಯ.