ಬೆಂಗಳೂರು: ಬಸ್ ನಿಲ್ದಾಣ & ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದವರನ್ನು ಟಾರ್ಗೆಟ್ ಮಾಡಿ ಮೊಬೈಲ್ ಕದಿಯುತ್ತಿದ್ದ ರೌಡಿಶೀಟರ್ ಗಳನ್ನು ಗೋವಿಂದರಾಜ ನಗರ ಪೊಲೀಸರು ಬಂಧಿಸಿದ್ದಾರೆ. ತುರುವೆಕೆರೆ ರೌಡಿಶೀಟರ್ ನಾಗರಾಜ್ @ ರಾಕಿ ಹಾಗೂ ಸೋಮನಾಯ್ಕ್ ಬಂಧಿತ ಆರೋಪಿಗಳಾಗಿದ್ದು,
ಬೈಕ್ ಕಳ್ಳತನ ಕೇಸ್ ನ ತನಿಖೆ ವೇಳೆ ಮೊಬೈಲ್ ಕಳ್ಳತನ ಪ್ರಕರಣ ಬಯಲಾಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣ & ರೇಲ್ವೆ ನಿಲ್ದಾಣದಲ್ಲಿ ಮಲಗಿದ್ದವರ ಮೊಬೈಲ್ ಕಳ್ಳತನ ಮಾಡ್ತಿದ್ದರು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ತುರುವೆಕೆರೆ ರೌಡಿಶೀಟರ್ ನಾಗರಾಜ್ ಅಲಿಯಾಸ್ ರಾಕಿ ಮೇಲೆ 6 ಕೇಸ್ ಪ್ರಕರಣಗಳಿವೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.