ಬೆಂಗಳೂರು: ಟ್ರಕ್ ನಲ್ಲಿ ಬರೋಬ್ಬರಿ 62 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಎಚ್ ಎಸ್ ಆರ್ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಅಲಿಯಾಸ್ ಬಿಡ್ಡ ಬಂಧಿತ ಆರೋಪಿಯಾಗಿದ್ದು, ಹೊಗೆಸೊಪ್ಪು ಎಂದು ಟ್ರಕ್ ಡ್ರೈವರ್ ಗೆ ಸುಳ್ಳು ಹೇಳಿ ಒರಿಸ್ಸಾದಿಂದ ಟ್ರಕ್ ನಲ್ಲಿ ಬರೋಬ್ಬರಿ 62 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದನು.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ರೌಡಿ ಶೀಟರ್ ಆಗಿದ್ದನು. ಆದ್ರೆ ಆರೋಗ್ಯ ಕಾರಣ ಕೊಟ್ಟು ರೌಡಿ ಶೀಟರ್ ತೆಗೆಯಲಾಗಿತ್ತು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಕೊಲೆ ,ರಾಬರಿ, ಮನೆಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಕುಡಿತ ಹಾಗೂ ಹುಡುಗಿಯರ ಚಟಕ್ಕೆ ಬಿದ್ದು ಗಾಂಜಾ ಪೆಡ್ಲಿಂಗ್ ಶುರು ಮಾಡಿದ್ದನು. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.