ಬೆಂಗಳೂರು: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂಬ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ್ ಸ್ವಾಮಿ ಸವಾಲಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ದಾಖಲೆ ಬಿಡುಗಡೆ ಮಾಡುವ ಮೂಲಕ ಓಪನ್ ಚಾಲೆಂಜ್ ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಪತ್ರಗಳ ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ, ಛಲವಾದಿ ನಾರಾಯಣಸ್ವಾಮಿ ಹಾಕಿದ ಚಾಲೆಂಜ್ ನ್ನು ಸ್ವೀಕಾರ ಮಾಡಿದರು.
ಛಲವಾದಿ ನಾರಾಯಣ್ ಸ್ವಾಮಿ ಅವರಿಗೆ ಎಲೆಕ್ಷನ್ ಗೆಲ್ಲೋಕೆ ಆಗಿರಲಿಲ್ಲ. ಬಿಜೆಪಿಯವರು ಒಳ್ಳೆ ಬಕ್ರನನ್ನು ಹಿಡಿದುಕೊಂಡಿದ್ದಾರೆ. ಮೂರು ನಾಲ್ಕು ಜನರನ್ನ ಬಯ್ಯೋದಕ್ಕೆ ಅವರನ್ನ ಇಟ್ಟುಕೊಂಡಿದ್ದಾರೆ. ಚಡ್ಡಿ ಅಭಿಯಾನ ಉಲ್ಲೇಖಿಸಿ ಛಲವಾದಿ ನಾರಾಯಣ್ ಸ್ವಾಮಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಸಂವಿಧಾನ ರಚನೆ ಮಾಡಿದಾಗ ಅಂಬೇಡ್ಕರ್ ಸೇರಿ ಎಲ್ಲಾ ಒಂದಾಗಿ ಕೆಲಸ ಮಾಡಿದ್ದೇವೆ ಎಂಬುದನ್ನ ಇತಿಹಾಸ ಹೇಳುತ್ತೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಭಾಷಣದಲ್ಲಿ ಕಾಂಗ್ರೆಸ್ ಬಗ್ಗೆ ಏನು ಮಾತನಾಡಿದ್ದಾರೆ ಅನ್ನೋದನ್ನ ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಆಢಳಿತದಲ್ಲಿ ಇರಲಿಲ್ಲ ಎಂದಿದ್ದರೆ ಪಾರ್ಲಿಮೆಂಟಿನಲ್ಲಿ ಕೋಲಾಹಲ ಆಗುತ್ತಿತ್ತು. ಕಾಂಗ್ರೆಸ್ ಶಿಸ್ತಿನಿಂದ ಸಂವಿಧಾನ ಬರೋದಕ್ಕೆ ಸಾಧ್ಯವಾಯ್ತು ಎಂದು ಅಂಬೇಡ್ಕರ್ ಅವರು ಪಾರ್ಲಿಮೆಂಟಿನಲ್ಲಿ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ದಾಖಲೆ ಮಾಡಿದರು.
ಸಾರ್ವಕರ್ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದು ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ ಪ್ರಿಯಾಂಕ್ ಖರ್ಗೆ, ಅಂಬೇಡ್ಕರ್ ಹೇಳಿಕೆ ಸುಳ್ಳಾದರೆ ಮಲ್ಲಿಕಾರ್ಜುನ ಖರ್ಗೆ , ಸಿದ್ದರಾಮಯ್ಯ , ನನಗೆ, ಜೈರಾಮ್ ರಮೇಶ್ ಗೆ ಒಂದು ಲಕ್ಷದ ಒಂದು ರೂಪಾಯಿ ಕೊಡ್ತಿನಿ ಅಂದಿದ್ದಾರೆ. ಛಲವಾದಿಯವರೇ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿ ರಾಜೀನಾಮೆ ಕೊಡಿ ಎಂದು ಪ್ರಿಯಾಂಕ್ ಸವಾಲು ಹಾಕಿದ್ದಾರೆ.
ಆರ್ ಎಸ್ ಎಸ್ ವರ್ಕ್ ಶಾಪ್ : ನಾನು ಯಾವುದೇ ದಾಖಲೆ ಇಲ್ಲದೆ ಮಾತಾನಾಡುವುದಿಲ್ಲ.
ಬಿಜೆಪಿಯವರಿಗೆ ಆರ್ ಎಸ್ ಎಸ್ ಬಗ್ಗೆ ಮಾತಾಡಬೇಕಾದ್ರೆ ವರ್ಕ್ ಶಾಪ್ ನಾನೇ ತಗೆಸುಕೊಳ್ಳುತ್ತೇನೆ. ಮತ್ತೆ ಬಿಜೆಪಿಯವರು ಈಗ ನೆಹರು ವಿಚಾರ ತರ್ತಾ ಇದ್ದಾರೆ. ನಾವೇನು ಇತಿಹಾಸ ತಿರುಚಿ ಹೇಳ್ತಿಲ್ಲ. ಬಿಜೆಪಿಯವರಿಗೆ ತತ್ವ ಸಿದ್ಧಾಂತವೇ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಾವರ್ಕರ್ ಗೆ ವೀರ್ ಎಂಬ ಬಿರುದು ಕೊಟ್ಟಿದ್ದು ಯಾರು ? ಎಂದು ಪ್ರಶ್ಚಿಸಿದ ಪ್ರಿಯಾಂಕ್ ಖರ್ಗೆ, ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ನಲ್ಲಿ ಇದ್ದಾಗ ಅವರಲ್ಲಿ ಅಂಬೇಡ್ಕರ್ ತತ್ವ ಇತ್ತು. ಈಗ ಬಿಜೆಪಿಯಲ್ಲಿ ಆರ್ ಎಸ್ ಎಸ್ ತತ್ವ ಅಳವಡಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.