ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಕಳೆದೊಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬೀಡು ಬಿಟ್ಟಿದ್ದರು. ಕುಮಟಾದ ರಾಮನಗಿಂಡಿ ಬೀಚ್ ದಡದಲ್ಲಿ ಅದ್ಧೂರಿ ಸೆಟ್ ಹಾಕಿ ತಮ್ಮ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ರಾಮನಗಿಂಡಿ ಬೀಚ್ನಲ್ಲಿ ಚಿತ್ರೀಕರಣ ಮುಗಿಸಿ ತಾರಕ್ ಹೈದ್ರಾಬಾದ್ಗೆ ಹಾರಿದ್ದಾರೆ. ಹತ್ತು ದಿನಗಳ ಕಾಲ ಈ ಜಾಗದಲ್ಲಿ ಹೈವೋಜ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ.
ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಡ್ರ್ಯಾಗನ್ ಎಂಬ ಟೈಟಲ್ ಇಡಲಾಗಿದೆ. ಆದ್ರೆ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್, ಈ ಡೆಡ್ಲಿ ಕಾಂಬೋದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇದೇ ತಿಂಗಳ 20ಕ್ಕೂ ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬವಿದೆ. ಹೀಗಾಗಿ ಚಿತ್ರತಂಡ ಟೀಸರ್ ರಿಲೀಸ್ ಮಾಡೋದಾಗಿ ಘೋಷಣೆ ಮಾಡಿದೆ. ಯಂಗ್ ಟೈಗರ್ ಸಿನಿಮಾ ಕರಿಯರ್ನ ಅತಿ ದೊಡ್ಡ ಬಜೆಟ್ ಸಿನಿಮಾ ಇದಾಗಿದೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ತಾರಕ್ ಬರೋಬ್ಬರಿ 18 ಕೆಜಿ ತೂಕ ಕಡಿಮೆ ಮಾಡಿದ್ದಾರಂತೆ. ಈ ಚಿತ್ರದ ಸ್ಪೆಷಲ್ ನಂಬರ್ಗೆ ಶೃತಿ ಹಾಸನ್ ಹೆಜ್ಜೆ ಹಾಕುವ ಗುಲ್ಲಿದೆ.
Two MASS ENGINES ready to wreck it all from tomorrow 💥💥#NTRNeel will shake the shorelines of Indian cinema 🔥🔥
MAN OF MASSES @tarak9999 #PrashanthNeel @MythriOfficial @NTRArtsOfficial @NTRNeelFilm @TSeries @tseriessouth pic.twitter.com/psHgfYWuF1
— Mythri Movie Makers (@MythriOfficial) April 21, 2025
ಕ್ರಿಕೆಟ್ ಆಡಿದ ತಾರಕ್-ಎನ್ಟಿಆರ್!
ಶೂಟಿಂಗ್ ಸೆಟ್ನಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ಕ್ರಿಕೆಟ್ ಆಡಿದ್ದಾರೆ. ಪ್ರಶಾಂತ್ ನೀಲ್ ಪತ್ನಿ ಲಿಖಿತಾ ರೆಡ್ಡಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
Director #PrashanthNeel Playing Cricket 🏏 On #NTRNeel Sets 💥.@tarak9999 🐉🔥. pic.twitter.com/DYkc84We80
— Sai Mohan 'NTR' (@Sai_Mohan_999) May 6, 2025