ಬೆಂಗಳೂರು: 2 ಕೋಟಿಯ ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಟಿಮ್ ಡೇವಿಡ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 3 ಕೋಟಿ ರೂ.ಗೆ ಖರೀದಿ ಮಾಡಿತ್ತ. ಇದೀಗ ಆರ್ ಸಿಬಿ ತಂಡದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ.
ಇದರ ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವನ್ನು ಸ್ಪೋಟಕ ವಿದೇಶಿ ಬ್ಯಾಟರ್ ಟಿಮ್ ಡೇವಿಡ್ ಶ್ಲಾಘಿಸಿದ್ದಾರೆ. ಎಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ ಟಿಮ್ ಡೇವಿಡ್, ಆರ್ಸಿಬಿಯ ಮಿಸ್ಟರ್ ನಾಗ್ಸ್ ಶೋನಲ್ಲಿ ಮಾತನಾಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಗೆಯ ಸಾರ್ವಜನಿಕ ಪಾರ್ಕ್ನ ಸೌಲಭ್ಯಗಳನ್ನು ಶ್ಲಾಘಿಸಿದ್ದಾರೆ.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಮೊದಲಿಗೆ ಮಿಸ್ಟರ್ ನಾಗ್ಸ್ ಅವರು, ನೀವು ಈಗ ಸಿಂಗಾಪೂರ್ನಲ್ಲಿ ಇಲ್ಲ, ಅಲ್ಲಿನ ಯಾವ ಕೆಲಸವನ್ನು ಬೆಂಗಳೂರಿನಲ್ಲಿ ಮಾಡುತ್ತೀರಾ ಎಂದು ಟಿಮ್ ಡೇವಿಡ್ ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಟಿಮ್ ಡೇವಿಡ್, ನಾನು ಸಿಂಗಾಪುರ್ನಲ್ಲಿದ್ದ ಸಾಕಷ್ಟು ವ್ಯಾಯಾಮಗಳನ್ನು ಮಾಡುತ್ತಿದ್ದೆ. ಇಲ್ಲಿ ಬಂದ ಮೇಲೆ ಆರ್ಸಿಬಿ ತಂಡದ ಕಂಡೀಷನಿಂಗ್ ತರಬೇತುದಾರ ಬಸು ಶಂಕರ್ ಒಂದು ದಿನ ಬೆಳಿಗ್ಗೆ ನನ್ನನ್ನು ಬಿಬಿಎಂಪಿ ಪಾರ್ಕ್ಗೆ ಕರೆದೊಯ್ದಿದ್ದರು. ಈ ವೇಳೆ ನಾನು ಅಲ್ಲಿ ವ್ಯಾಯಾಮ, ವಾಕಿಂಗ್, ಶೋಲ್ಡರ್ ವರ್ಕೌಟ್ಗಳನ್ನು ಮಾಡಿದ್ದೆ.
ಸಿಂಗಾಪೂರ್ನಲ್ಲಿ ಇರುವಂತೆ ಬೆಂಗಳೂರಿನಲ್ಲಿಯೂ ಬಿಬಿಎಂಪಿ ಪಾರ್ಕ್ನಲ್ಲಿ ಓಪನ್ ಜಿಮ್ಗಳಿವೆ ಎಂದು ಟಿಮ್ ಡೇವಿಡ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಅನ್ನು ಬಿಬಿಎಂಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.