ಕೆಲವರಿಗೆ ಕಂಕುಳ ತುಂಬಾ ಬೆವರುತ್ತದೆ. ಹೀಗೆ ಬೆವರುವುದರಿಂದ ಮೈ ದುರ್ವಾಸನೆ ಬೀರುವುದು. ಕಂಕುಳ ದುರ್ವಾಸನೆ ಬೀರುವುದರಿಂದ ನಮ್ಮ ಸಮೀಪ ಕೂತವರಿಗೆ ಕಿರಿಕಿರಿ ಹಾಗೂ ನಮ್ಮ ಆತ್ಮವಿಶ್ವಾಸವನ್ನು ಕೂಡ ತಗ್ಗಿಸುವುದು. ಆದ್ದರಿಂದ ಕಂಕುಳ ಬೆವರುವುದನ್ನು ತಡೆಗಟ್ಟಲು ಗಮನ ನೀಡಕೇಬೇಕು. ತುಂಬಾ ಬೆವರುವ ಸಮಸ್ಯೆ ಇರುವವರು ಈ ಟ್ರಿಕ್ಸ್ ಪಾಲಿಸಿದರೆ ಬೆವರಿನ ಸಮಸ್ಯೆ ತಡೆಗಟ್ಟಬಹುದು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ನಿಂಬೆ
ಬೆವರು ಕೆಟ್ಟ ವಾಸನೆ ಹೋಗಲಾಡಿಸಲು ನಿಂಬೆ ಬಳಕೆ ಮಾಡಿ. ಇದನ್ನು ಬಳಸಲು ನಿಂಬೆ ಹಣ್ಣನ್ನು ಅರ್ಧ ಕತ್ತರಿಸಿ. 10 ನಿಮಿಷದವರೆಗೆ ಅಂಡರ್ ಆರ್ಮ್ಸ್ ಮೇಲೆ ಉಜ್ಜಿಕೊಳ್ಳಿ ಮತ್ತು ನಂತರ ತಣ್ಣೀರಿನಿಂದ ತೊಳೆಯಿರಿ.
ಅಲೋವೆರಾ
ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಳ್ಳಿ. ರಾತ್ರಿಯಲ್ಲಿ ಜೆಲ್ ಅನ್ನು ಅಂಡರ್ ಆರ್ಮ್ಸ್ ಮೇಲೆ ಅನ್ವಯಿಸಿ. ರಾತ್ರಿಯಿಡೀ ಹಾಗೆ ಬಿಡಿ ಮತ್ತು ಮರುದಿನ ಬೆಳಿಗ್ಗೆ ನೀರಿನಿಂದ ತೊಳೆಯಿರಿ. ಇದು ನಿಮಗೆ ವಾಸನೆಯಿಂದ ಪರಿಹಾರ ನೀಡುತ್ತದೆ.
ರೋಸ್ ವಾಟರ್
ಕಂಕುಳಲ್ಲಿ ಮತ್ತು ಬೆವರಿರುವ ಜಾಗಗಳ ಮೇಲೆ ರೋಸ್ ವಾಟರ್ ಸ್ಪ್ರೇ ಮಾಡಿ. ಅಥವಾ ಹತ್ತಿಯ ಸಹಾಯದಿಂದ ರೋಸ್ ವಾಟರ್ ಹಾಕಿ ಕಂಕುಳನ್ನು ಸ್ವಚ್ಛಗೊಳಿಸಿ. ಸ್ನಾನದ ನೀರಿಗೆ ಸ್ವಲ್ಪ ರೋಸ್ ವಾಟರ್ ಸೇರಿಸಿ ಸ್ನಾನ ಮಾಡಿದರೆ ಬೆವರಿನ ವಾಸನೆ ಹೋಗಿ ಪರಿಹಾರ ಪಡೆಯಬಹುದು.
ಅಡಿಗೆ ಸೋಡಾ
ಒಂದು ಟೀ ಚಮಚ ಅಡಿಗೆ ಸೋಡಾವನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಮತ್ತು ಅದನ್ನು 15 ನಿಮಿಷದವರೆಗೆ ಅಂಡರ್ ರ್ಆರ್ಮ್ನಲ್ಲಿ ಇರಿಸಿ. ನಂತರ ಸ್ನಾನ ಮಾಡಿ. ಇದು ನಿಮಗೆ ಬೆವರಿನ ವಾಸನೆಯಿಂದ ಮುಕ್ತಿ ನೀಡುತ್ತದೆ.
ಹರಳೆಣ್ಣೆ
ಹರಳೆಣ್ಣೆ ನಂಜು ನಿರೋಧಕ ಗುಣ ಹೊಂದಿದೆ. ಸ್ನಾನ ಮಾಡುವ ಮೊದಲು ಹರಳೆಣ್ಣೆಯನ್ನು ಕಂಕುಳಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಉಜ್ಜಿ ಚೆನ್ನಾಗಿ ತೊಳೆಯಿರಿ. ಇದು ಕಂಕುಳ ವಾಸನೆ ತೆಗೆದು ಹಾಕುತ್ತದೆ. ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುತ್ತದೆ.