ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿಗೆ ಮತ್ತೊಮ್ಮೆ ಜೈಲುಪಾಲಾಗುವ ಭೀತಿ ಎದುರುರಾಗಿದೆ. ಓಎಂಸಿ ಅಕ್ರಮ ಮೈನಿಂಗ್ ಪ್ರಕರಣದ ವಿಚಾರವಾಗಿ ಇಂದು ದೆಹಲಿಯ ಸಿಬಿಐ ಕೋರ್ಟ್ ನಿಂದ ತೀರ್ಪು ಪ್ರಕಟವಾಗಿದ್ದು, ಜನಾರ್ದನ ರೆಡ್ಡಿ ಆಪರಾಧಿ ಎಂದು ಹೇಳಿದೆ. ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ, , ಅಲಿಖಾನ್ ಅಪರಾಧಿ ಎಂದು ಕೋರ್ಟ್ ತೀರ್ಪು ಕೊಟ್ಟಿದೆ.
ಏನಿದು ಪ್ರಕರಣ?
ಆಂಧ್ರದಲ್ಲಿ ರಾಜಶೇಖರರೆಡ್ಡಿ ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ ಆಡಳಿತದಲ್ಲಿದ್ದಾಗ ಓಎಂಸಿ ಅಕ್ರಮ ನಡೆದಿತ್ತು. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಅದಿರಿನ ಅಕ್ರಮ ಗಣಿಕಾರಿಕೆಗೆ ನಡೆಸಲಾಗಿತ್ತು. ಅಂದಿನ ಸಮಯದಲ್ಲಿ ಶ್ರೀನಿವಾಸರೆಡ್ಡಿ ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ, ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ನಿಗಧಿಗಿಂತ ಹೆಚ್ಚು ಅದರಿನ್ನು ಅಕ್ರಮವಾಗಿ ತೆಗೆದು ಸಾಗಾಣೆ ಮಾಡಲಾಗಿತ್ತು . ಕರ್ನಾಟಕದ ಗಡಿಯನ್ನು ಒತ್ತುವರಿ ಮಾಡಿ ಅದಿರನ್ನು ಲೂಟಿ ಮಾಡಿದ್ರು ಎನ್ನುವ ಆರೋಪ ಇತ್ತು.
ಅನಂತಪುರಂ ಜಿಲ್ಲೆಯ ಡಿಎಫ್ಓ ಬಳ್ಳಾರಿಯ ಡಿಎಫ್ ಓ ಅವರಿಗೆ ಕರ್ನಾಟಕದಿಂದ ಆಂದ್ರಕ್ಕೆ ಅಕ್ರಮವಾಗಿ ಕಬ್ಬಿಣ ಅದಿರು ಬರುತ್ತಿದೆ ತಡೆಯಬೇಕೆಂದು ಪತ್ರ ಬರೆದಿದ್ದರು. ಇದರ ಮೇಲೆ ಓಎಂಸಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ವಿಷಯವನ್ನು ಆಂದ್ರದ ಪ್ರತಿಪಕ್ಷಗಳು ಸದನದಲ್ಲಿ ತನಿಖೆಗೆ ಆಗ್ರಹ ಮಾಡಿದ್ದವು. ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್ ನ ರೋಷಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದರು.
2011 ರ ಸೆಪ್ಟೆಂಬರ್ 5 ರಂದು ಜನಾರ್ದನರೆಡ್ಡಿ , ಶ್ರೀನಿವಾಸರೆಡ್ಡಿ, ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ ಬಂಧಿಸಿದ್ರು. ಬಳ್ಳಾರಿಗೆ ಬಂದು ಅರೆಸ್ಟ್ ಮಾಡಿ ಕರೆದುಕೊಂಡು ಚಂಚಲಗುಡ ಜೈಲಿಗೆ ಕಳುಹಿಸಿದ್ದರು. ಮೂರೂವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸವನ್ನು ಜನಾರ್ದನ ರೆಡ್ಡಿ ಅನುಭವಿಸಿ ಬಂದಿದ್ದರು. ಕನಾರ್ಟಕದ ಗಡಿಗೆ ಹೊಂದಿಕೊಂಡಿದ್ದ ಪ್ರದೇಶ ಬಳಸಿಕೊಂಡು ಆಂದ್ರದಲ್ಲಿ ಪರ್ಮಿಟ್ ಪಡೆದು ಕರ್ನಾಟಕದ ಗಡಿಯನ್ನು ಒತ್ತುವರಿಮಾಡಿದ್ರು. ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ ಆದಾಯ ಪಡೆದಿದ್ದಾರೆಂಬುದು ಆರೋಪ ಕೇಳಿ ಬಂದಿತ್ತು.