ಯಾದಗಿರಿ : ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರಕ್ಕೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಚಾಲನೆ ನೀಡಿದರು.
ಅಧಿಕಾರಗಳ ಸಹಕಾರದೊಂದಿಗೆ ಒಂದು ತಿಂಗಳ ಕಾಲ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಯೋಗ, ವಾಲಿಬಾಲ್, ನೃತ್ಯ, ಸಂಗೀತ, ಚಿತ್ರಕಲೆ, ಕರಾಟೆ, ಯಕ್ಷಗಾನ, ದೊಡ್ಡಾಟ, ಹತ್ತಿರದ ಸ್ಥಳಕ್ಕೆ, ಮತ್ತಿತರ ಚಟುವಟಿಕೆಗಳನ್ನು ನಡೆಸುವುದಾಗಿ ಅವರು ತಿಳಿಸಿದರು.
ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜತೆಗೆ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಈ ವರ್ಷ ಉಚಿತ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸಂತಸ ಮೂಡಿಸಿದೆ ಎಂದರು
ಸಮಾರಂಭದಲ್ಲಿ ಡಿವೈಎಸ್ಪಿ ಭರತ್ ತಳವಾರ ಸಿಪಿಐ ಶ್ರೀದೇವಿ ಬಿರಾದಾರ್ ಮತ್ತು ಎಸ್ಪಿ ಕಚೇರಿಯ ಸಿಬ್ಬಂದಿ, ಮಕ್ಕಳು ಪಾಲ್ಗೊಂಡಿದ್ದರು.
BREAKING: ಮತ್ತೆ ಜೈಲುಪಾಲದ ಶಾಸಕ ಜನಾರ್ದನ ರೆಡ್ಡಿ..7 ವರ್ಷ ಜೈಲು ಶಿಕ್ಷೆ ವಿಧಿಸಿದ ದೆಹಲಿ ಸಿಬಿಐ ಕೋರ್ಟ್!