ವಿಶ್ವದ ದುಬಾರಿ ಮದುವೆ ಅಂದ್ರೆ ನಮಗೆ ಮೊದಲು ನೆನಪಾಗುವುದು ಅಂಬಾನಿ ಪುತ್ರನ ವೈಭೋವಪೇತ ಕಲ್ಯಾಣ. ಹಾಗೆಯೇ ಕರ್ನಾಟಕದ ದುಬಾರಿ ಕಲ್ಯಾಣ ಅಂದ್ರೆ ನಮಗೆ ಕಣ್ಮುಂದೆ ಬರುವುದು ಜನಾರ್ದನ ರೆಡ್ಡಿ ಮಗಳ ಮದುವೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 2016ರಲ್ಲಿ ನಾಲ್ಕೈದು ದಿನಗಳ ಕಾಲ ನಡೆದ ಧಾಮ್ ಧೂಮ್ ಮದುವೆಗೆ ಗಣಿಧಣಿ ರೆಡ್ಡಿ ಖರ್ಚು ಮಾಡಿದ್ದು, ಇಪ್ಪತ್ತು ಮೂವತ್ತು ಕೋಟಿಯಲ್ಲ. ಬರೋಬ್ಬರಿ 500ರಿಂದ 600 ಕೋಟಿಯಂತೆ.
ಹೈದರಾಬಾದ್ ಮೂಲದ ಉದ್ಯಮಿಯ ಪುತ್ರ ರಾಜೀವ್ ರೆಡ್ಡಿ ಅವರೊಂದಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳು ಬ್ರಹ್ಮಿಣಿ 2016ರಲ್ಲಿ ನವೆಂಬರ್ 16ರಂದು ಹಸೆಮಣೆ ಏರಿದ್ದರು. ಇದು ಸಾಮಾನ್ಯ ಮದುವೆಯಲ್ಲ. ಅದ್ದೂರಿ ಕಲ್ಯಾಣ. ಸ್ವರ್ಗವನ್ನೇ ಧರೆಗಿಳಿಸುವಂತೆ ಅದ್ಧೂರಿ ಸೆಟ್ನಲ್ಲಿ ನಾ ಭೂತೋ ನ ಭವಿಷ್ಯತಿ ಎನ್ನುವಂತೆ ರೆಡ್ಡಿ ಪುತ್ರಿಯನ್ನು ಧಾರೆ ಎರೆದುಕೊಟ್ಟಿದ್ದರು.
ನೋಟು ರದ್ದತಿ ಬಳಿಕ ನಡೆದಿದ್ದ ಮದುವೆ!
ನೆನಪಿರಲಿ..ಇದು ನೋಟು ರದ್ದತಿ ಘೋಷಣೆಯ ನಂತರ ದೇಶದಲ್ಲಿ ನಗದು ಕೊರತೆ ಎದುರುಸಿದ ಒಂದು ಕುಟುಂಬವಿದ್ದರೆ ಅದು ಗಾಲಿ ಜನಾರ್ದನ ರೆಡ್ಡಿ ಕುಟುಂಬ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹಣ ವರ್ಗಾವಣೆ ಮತ್ತು ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಗಣಿ ಉದ್ಯಮಿ ಮತ್ತು ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ, ತಮ್ಮ ಮಗಳು ಬ್ರಾಹ್ಮಿಣಿಗಾಗಿ ಬೆಂಗಳೂರಿಗಾಗಿ ಕಲ್ಪನೆಗೂ ಮೀರಿದ ರೀತಿ ಮದುವೆ ಮಾಡಿಸಿದ್ದರು.
ಹೇಗಿತ್ತು ಮದುವೆ?
5 ದಿನಗಳ ನಡೆದ ಮದುವೆ ಸಮಾರಂಭದಲ್ಲಿ ಸುಮಾರು 50 ಸಾವಿರ ಅತಿಥಿಗಳು ಆಗಮಿಸಿದ್ದರು. ಮದುವೆಗೆ ಆಗಮಿಸಿದ್ದ ಅತಿಥಿಗಳ ತಂಗಲು ಬೆಂಗಳೂರಿನ 5 ಮತ್ತು 3 ಸ್ಟಾರ್ ಹೋಟೆಲ್ಗಳ 1500 ಕೊಠಡಿಗಳನ್ನು ಕಾಯ್ದಿರಿಸಿದ್ದರು. ಸ್ಥಳದಲ್ಲಿ ಭದ್ರತೆಗಾಗಿ 3 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಕುಟುಂಬ ಸದಸ್ಯರು 5 ಕೋಟಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳನ್ನು ಧರಿಸಿದ್ದರಂತೆ.
ರೆಡ್ಡಿ ಪುತ್ರಿಗಾಗಿ ಮದುವೆಗಾಗಿ ಕಾಂಜೀವರಂ ಸೀರೆಯನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಇದಕ್ಕೆ 17 ಕೋಟಿ ರೂ. ವೆಚ್ಚವಾಗಿದೆ. ಮದುವೆಯಲ್ಲಿ ಸುಮಾರು 50 ಮೇಕಪ್ ಕಲಾವಿದರನ್ನು ನೇಮಿಸಲಾಯಿತು. ಈ ಪೈಕಿ ಒಬ್ಬರನ್ನು ಮುಂಬೈನಿಂದ ವಿಶೇಷವಾಗಿ ಕರೆಸಲಾಗಿತ್ತು. ಈ ಸಂಪೂರ್ಣ ವ್ಯವಸ್ಥೆಗೆ 30 ಲಕ್ಷ ರೂ. ಖರ್ಚು ಮಾಡಲಾಗಿತ್ತಂತೆ.
ವೈರಲ್ ಆಗಿತ್ತು ಮದುವೆ ಕಾರ್ಡ್!
ಮದುವೆಯ ಆಮಂತ್ರಣ ಪತ್ರಗಳನ್ನು LCD ಪರದೆಯ ಕಾರ್ಡ್ಗಳ ಮೂಲಕ ಅತಿಥಿಗಳಿಗೆ ಕಳುಹಿಸಲಾಯಿತು. ಈ ವಿಶೇಷ ಆಮಂತ್ರಣ ಪತ್ರ ತೆರೆದಾಗ LCD ಪರದೆಯು ಜೊತೆಗೆ ಸಂಗೀತವನ್ನು ಪ್ಲೇ ಆಗುತ್ತಿತ್ತು. ಆ ಸಮಯದಲ್ಲಿ ಈ ದುಬಾರಿ ಮೌಲ್ಯದ ಕಾರ್ಡ್ ವೈರಲ್ ಆಗಿತ್ತು. ಇದರಲ್ಲಿ ರೆಡ್ಡಿ ಕುಟುಂಬದವರು ವಿಡಿಯೋ ಮೂಲಕ ಅತಿಥಿಗಳನ್ನು ಆಹ್ವಾನಿಸುತ್ತಿರುವುದು ಕಂಡುಬಂದಿತ್ತು.
ಮದುವೆಗೆ ಬಂದ ಅತಿಥಿಗಳಿಗೆ ಗೇಟ್ನಲ್ಲೇ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಒಳಗೆ ಕರೆದೊಯ್ಯಲು 40 ರಾಜಮನೆತನದ ಎತ್ತಿನ ಬಂಡಿಗಳ ವ್ಯವಸ್ಥೆ ಇತ್ತು. ಬಾಲಿವುಡ್ನ ಕಲಾ ನಿರ್ದೇಶಕರು ವಿಜಯನಗರ ಶೈಲಿಯಲ್ಲಿ ಹಲವು ದೇವಾಲಯಗಳನ್ನು ಸಿದ್ಧಪಡಿಸಿದ್ದರು. ಊಟದ ಪ್ರದೇಶಕ್ಕೆ ಬಳ್ಳಾರಿ ಹಳ್ಳಿಯ ಲುಕ್ ನೀಡಲಾಗಿತ್ತು. ಅತಿಥಿಗಳನ್ನು ಕರೆತರಲು 2 ಸಾವಿರ ಟ್ಯಾಕ್ಸಿಗಳು ಮತ್ತು 15 ಹೆಲಿಕಾಪ್ಟರ್ಗಳ ವ್ಯವಸ್ಥೆ ಮಾಡಲಾಗಿತ್ತು. ಕುತೂಹಲವೆಂದರೆ ಜನಾರ್ದನ ರೆಡ್ಡಿ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು, ಆದ್ದರಿಂದ ಎಲ್ಲಾ ಪಕ್ಷಗಳು ಈ ಮದುವೆ ಕಾರ್ಯಕ್ರಮವನ್ನು ವಿರೋಧಿಸಿದವು. ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಅವರು ರೆಡ್ಡಿ ಮಗಳ ಮದುವೆಗೆ ಖರ್ಚು ಮಾಡಲು 500 ಕೋಟಿ ರೂ. ಎಲ್ಲಿಂದ ಬಂತು ಎಂದು ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದ್ದರು.