ಕೋಲಾರ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗಿಕರಣ ಸಮೀಕ್ಷೆ ನಡೆಸುವಾಗ ಗಣತಿದಾರರು ತಾಳ್ಮೆಯಿಂದ ತರಾತುರಿ ಇಲ್ಲದೆ ಸಂಯಮದಿಂದ ವರ್ತಿಸಬೇಕು ಎಂದು ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತ ಏಕ ಸದಸ್ಯ ವಿಚಾರಣ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಡಾ. ಹೆಚ್. ಎನ್. ನಾಗಮೋಹನ್ ದಾಸ್ ರವರು ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು,
ನಾವು ಮಾಡುವಂತಹ ಸಣ್ಣ ತಪ್ಪಿನಿಂದ ಪರಿಶಿಷ್ಟ ಜಾತಿ ಜನಾಂಗಕ್ಕೂ ತೊಂದರೆ ಆಗುವ ಸಾಧ್ಯತೆಯಿದೆ ಅಥವಾ ಯಾವುದಾದರು ಒಂದು ಉಪ ಜಾತಿ/ ಒಬ್ಬ ವ್ಯಕ್ತಿಗೆ ತೊಂದರೆ ಆಗಬಹುದು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ತಾವೆಲ್ಲರೂ ಸಹ ತರಬೇತಿದಾರರು ತಮ್ಮ ಕೆಳಗಿರುವ ಗಣತಿದಾರರಿಗೆ ಸ್ಪಷ್ಠ ಮಾಹಿತಿ ನೀಡಬೇಕು ತಮಗೆ ಯಾವುದೇ ತಾಂತ್ರಿಕ ಸಮಸ್ಯೆಗಳು ಬಂದಲ್ಲಿ ತಕ್ಷಣವೆ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಮಾರ್ಗದರ್ಶನ ಪಡೆಯಬೇಕು ಮತ್ತು ತಾವು ತಿಳಿಸಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಲಾಗುವುದು ಎಂದು ತಿಳಿಸಿದರು.