ಮಂಡ್ಯ:- ಮಂಡ್ಯದ ಆಲಕೆರೆ ಗ್ರಾಮದ ಬೃಹತ್ ವೀರಭದ್ರೇಶ್ಚರ ಕೊಂಡೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ದೊರೆತಿದೆ.
ಸಾವಿರಾರು ಜನರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಲಾಗಿದೆ. ಶಾಸಕ ರವಿಕುಮಾರ್ ಡಿಸಿ,ಎಸ್ಪಿ, ಸೇರಿ ಹಲವು ಗಣ್ಯರು ಕೊಂಡೋತ್ಸವದಲ್ಲಿ ಭಾಗಿಯಾದರು. ರಾಜ್ಯದ ಬೃಹತ್ ಕೊಂಡೋತ್ಸವ ಎಂಬ ಹೆಗ್ಗಳಿಕೆ ಇರುವ ಆಲಕೆರೆ ವೀರಭದ್ರೇಶ್ವರ ಕೊಂಡೋತ್ಸವ ಇದಾಗಿದೆ.
72 ಅಡಿ ಉದ್ದ,25 ಅಡಿ ಎತ್ತರ,12 ಅಡಿ ಅಗಲದ ಬೃಹತ್ ಕೊಂಡೋತ್ಸವ ಬಹಳ ವಿಜೃಂಭಣೆಯಿಂದ ನಡೀತಾಯಿದೆ.