ಇವತ್ತು ಇಡೀ ವಿಶ್ವವೇ ಭಾರತವನ್ನು ಅಚ್ಚರಿಯಿಂದ ನೋಡುವಂತಾಗಿದೆ. ಪಾಪಿ ಪಾಕಿಸ್ತಾನ ಇಡೀ ಜಗತ್ತಿನ ಎದುರು ಮತ್ತೆ ಬೆತ್ತಲಾಗಿದೆ. ತಿನ್ನಲು ಅನ್ನ ಇಲ್ಲದಿದ್ದರೂ ಭಯೋತ್ಪಾದನೆ ಬೆಳೆಸುತ್ತಿರುವ ಪಾಕ್ ಭಾರತ ಮುಟ್ಟಿ ನೋಡಿಕೊಳ್ಳುವಂತಹ ದಿಟ್ಟ ಉತ್ತರ ಕೊಟ್ಟಿದೆ.
ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಸೇಡು ತೀರಿಸಿಕೊಂಡಿದೆ. ಇದು ಇಲ್ಲಿಗೆ ಸದ್ಯಕ್ಕೆ ನಿಲ್ಲೋಲ್ಲ ಬಿಡಿ. ಪಿಕ್ಚರ್ ಅಭಿ ಬಾಕಿ ಹೈ ಅನ್ನಬಹುದು. ನೆನಪಿರಲಿ..ಈ ಹಿಂದೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿನ ಭಾರತೀಯ ಸೇನೆ ನೆಲೆಯ ಮೇಲೆ 2016ರ ಸೆಪ್ಟಂಬರ್ 18ರಂದು ಭೀಕರ ಆತ್ಮಾಹುತಿ ದಾಳಿ ನಡೆಸಿತ್ತು. ಈ ಘಟನೆಯಲ್ಲಿ 19 ಯೋಧರು ಮರಣ ಹೊಂದಿದ್ದರು.
ಉರಿ ದಾಳಿಗೆ ಯೋಧರು ಕ್ರೂರವಾಗಿ ಹತ್ಯೆಯಾದಾಗ ಸೈನಿಕರಲ್ಲಿ ಅಗಾಧ ಆಕ್ರೋಶ ಮಡುಗಟ್ಟಿತ್ತು. ಅದರ ಬೆನ್ನಲ್ಲೇ ಪ್ರತೀಕಾರದ ಕ್ರಮವಾಗಿ ಸರ್ಜಿಕಲ್ ದಾಳಿಗೆ ಯೋಜನೆ ರೂಪಿಸಲಾಗಿತ್ತು. ಸೆ. 18ರಂದು ಸೈನಿಕರ ನೆಲೆಯ ಮೇಲೆ ದಾಳಿ ನಡೆದ 11 ದಿನಗಳಲ್ಲಿಯೇ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು. ಇದೀಗ ಪಹಲ್ಗಾಮ್ ದಾಳಿ ನಡೆದ 16 ದಿನಗಳಲ್ಲಿ ಆಪರೇಷನ್ ಸಿಂಧೂರ ಮಿಲಿಟಿರಿ ಕಾರ್ಯಾಚರಣೆ ನಡೆಸಲಾಗಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್ ಬಳಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿ ನಡೆಸಿದ್ದರು. ಕಾಶ್ಮೀರ ಪ್ರಕೃತಿ ಸೌಂದರ್ಯ ಸವಿಯಲು ಹೋಗಿದ್ದ ಪ್ರವಾಸಿಗರನ್ನು ಧರ್ಮ ಕೇಳಿ ಕ್ರೂರವಾಗಿ ಉಗ್ರರು ಗುಂಡಿಟ್ಟು ಕೊಂದಿದ್ದರು. ಬೈಸರನ್ ಕಣಿವೆ ಪ್ರವಾಸಿ ತಾಣದಲ್ಲಿ ನಡೆದ ಈ ದಾಳಿ 2008ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿತ್ತು.
ಪಾಪಿ ಉಗ್ರರು ನಡೆಸಿದ ಈ ಪೈಶಾಚಿಕ ಕೃತ್ಯಕ್ಕಿಂದು ಭಾರತ ತಕ್ಕ ಶಾಸ್ತ್ರೀ ಮಾಡಿಎ. ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ಪ್ರತ್ಯುತ್ತರ ಕೊಟ್ಟಿದೆ. ಪಹಲ್ಗಾಮ್ ದಾಳಿ ನಡೆದ 16 ದಿನದಲ್ಲಿಯೇ ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆಯನ್ನು ಮಾಡಿ ಅದರಲ್ಲಿ ಯಶಸ್ಸು ಕಂಡಿದೆ. ಪಾಕ್ ಭಯೋತ್ಪಾಕ 9 ತಾಣಗಳ ಮೇಲೆ ಏರ್ ಸ್ಟ್ರೈಕ್ ಮಾಡಿ ಉಡೀಸ್ ಮಾಡಿದೆ.