ವಿವಾಹವಾಗಬೇಕು ಎನ್ನುವ ಬಯಕೆ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಕಂಕಣ ಬಲ ಬೇಗನೇ ಕೂಡಿ ಬಂದರೆ, ಇನ್ನೂ ಕೆಲವರಿಗೆ ವಯಸ್ಸು ದಾಟಿದರೂ ಕಂಕಣ ಬಲ ಕೂಡಿ ಬರುವುದಿಲ್ಲ. ಶೀಘ್ರ ಕಂಕಣ ಬಲ ಕೂಡಿ ಬರಲು ಹುಡುಗರು ಏನು ಮಾಡಬೇಕು? ಹುಡುಗಿಯರು ಏನು ಮಾಡಬೇಕು? ಕೆಲವು ಕಾರಣಗಳಿಂದ ನೀವು ಮದುವೆಯಾಗದಿದ್ದರೆ, ಮದುವೆಯಾಗಲು ಹಲವು ಅಡೆತಡೆಗಳಿವೆ ಎಂದು ನೀವು ಭಾವಿಸುತ್ತಿದ್ದರೆ, ನೀವು ಖಂಡಿತವಾಗಿ ವಿವಾಹವಾಗಲೇಬೇಕೆಂದು ಬಯಸುತ್ತಿದ್ದರೆ ಈ ಕೆಲಸ ಮೊದಲು ಮಾಡಿ..
ಹಿಂದೂ ಧರ್ಮದಲ್ಲಿ, ವಾರದ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಪ್ರತಿ ದಿನವನ್ನೂ ಯಾವುದದರೂ ಒಂದು ದೇವರಿಗೆ ಸಮರ್ಪಿಸಲಾಗಿರುತ್ತದೆ. ಅದೇ ರೀತಿ ಮಂಗಳವಾರ ಆಂಜನೇಯನಿಗೆ ಅರ್ಪಣೆ. ಹನುಮಂತನ ಆಶೀರ್ವಾದಕ್ಕಾಗಿ ಮಂಗಳವಾರ ಅತ್ಯುತ್ತಮ ದಿನ. 9 ಗ್ರಹಗಳಲ್ಲಿ ಒಂದಾದ ಮಂಗಳ ಗ್ರಹಕ್ಕೂ ಮಂಗಳವಾರಕ್ಕೂ ಸಂಬಂಧವಿದೆ.
ಮಂಗಳ ಗ್ರಹವು ಧೈರ್ಯ, ಶೌರ್ಯ, ಭೂಮಿ, ಸಹೋದರ ಮತ್ತು ವಿವಾಹದ ಅಂಶವಾಗಿದೆ. ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾಗಿದ್ದರೆ ಅಥವಾ ಅಶುಭವಾಗಿದ್ದರೆ, ಮದುವೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಸಂಬಂಧವು ಮತ್ತೆ ಮತ್ತೆ ಮುರಿದು ಬೀಳುತ್ತದೆ.ಒಂದು ವೇಳೆ ಮದುವೆಯಾದರೂ ಆ ಸಂಬಂಧ ಕೂಡಾ ಸರಿಯಾಗು ಮುಂದುವರೆಯುವುದಿಲ್ಲ. ಆದ್ದರಿಂದ, ವೈವಾಹಿಕ ಜೀವನದ ಸಂತೋಷಕ್ಕಾಗಿ ಮಂಗಳ ಗ್ರಹದ ಸ್ಥಾನ ಬಲಶಾಲಿಯಾಗಿರುವುದು ಮುಖ್ಯ. ಹಾಗೆಯೇ ಮದುವೆಗೆ ಎದುರಾಗಿರುವ ಸಮಸ್ಯೆಗಳ ನಿವಾರಣೆಗೆ ಮತ್ತು ಉದ್ಯೋಗ ಅಥವಾ ವ್ಯವಹಾರದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮಂಗಳವಾರ ಕೆಲವು ಕ್ರಮಗಳನ್ನು ಅನುಸರಿಸಬೇಕು.
ಮದುವೆಯಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತಿದ್ದರೆ ಅಥವಾ ನಿಮಗೆ ಸೂಕ್ತ ಜೀವನ ಸಂಗಾತಿ ಸಿಗದಿದ್ದರೆ, ಮಂಗಳವಾರ ಹನುಮಾನ್ ದೇವಸ್ಥಾನದಲ್ಲಿ ಸಿಂಧೂರವನ್ನು ಅರ್ಪಿಸಿ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ. ಇದಾದ ನಂತರ ಹನುಮಾನ್ ಚಾಲೀಸಾ ಪಠಿಸಿ.
– ಮಂಗಳವಾರ ಬಡ ಹುಡುಗಿಗೆ ಕೆಂಪು ಬಟ್ಟೆ ಮತ್ತು ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಸರಿಯಾದ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬರುವುದು.
– ಮಂಗಳ ದೋಷವನ್ನು ತೊಡೆದುಹಾಕಲು, ಮಂಗಳವಾರ ಕೆಂಪು ಬೇಳೆ ಮತ್ತು ಬೆಲ್ಲವನ್ನು ದಾನ ಮಾಡಿ. ಇದರಿಂದಾಗಿ, ಮಂಗಳ ಗ್ರಹವು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ.
ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ ಮಂಗಳವಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಿ.
– ನೀವು ಬಯಸಿದ ಕೆಲಸ ಸಿಗದಿದ್ದರೆ, ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಹನುಮಂತನಿಗೆ ವೀಳ್ಯದೆಲೆ ಅರ್ಪಿಸಿ. ನಂತರ ಹನುಮಾನ್ ಅಷ್ಟಕವನ್ನು ಪಠಿಸಿ.
– ಸರ್ಕಾರಿ ಕೆಲಸ ಪಡೆಯಲು ಶ್ರಮಿಸುವುದರ ಜೊತೆಗೆ, ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಓದಿದ ನಂತರ ಬಜರಂಗಬಲಿಗೆ ಬೂಂದಿ ಅರ್ಪಿಸಿ.
– ಮಂಗಳವಾರ ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
– ಯಾವುದೇ ದೊಡ್ಡ ಸಮಸ್ಯೆ ಎದುರಾದರೆ ಭಜರಂಗಬಾಣವನ್ನು ಕ್ರಮಬದ್ಧವಾಗಿ ಪಠಿಸಿ