ಪಹಲ್ಗಾಮ್ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, ತನ್ನ ಸೇಡು ತೀರಿಸಿಕೊಂಡಿದೆ. ಆಪರೇಷನ್ ಸಿಂಧೂರವನ್ನು ಸೆಲೆಬ್ರಿಟಿಗಳು ಸೇರಿ ರಾಜಕೀಯ ಗಣ್ಯರು ಬೆಂಬಲ ಸೂಚಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಧ್ರುವ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದು, ದೇಶದಲ್ಲಿರುವ ಹಿತಶತ್ರುಗಳಿಗೆ ನಟ ಎಚ್ಚರಿಕೆ ನೀಡಿದ್ದಾರೆ. ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ ಆಗುತ್ತೀರಿ. ಭಾರತಕ್ಕೆ ದ್ರೋಹಿಗಳಾಗಬೇಡಿ ಎಂದಿದ್ದಾರೆ.
ರೋಹಿತ್ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿಟ್ ಮ್ಯಾನ್!
ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗರೇ, ನೀವು ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ ಆಗುತ್ತೀರಿ. ಭಾರತಕ್ಕೆ ದ್ರೋಹಿಗಳಾಗಬೇಡಿ. ಭಾರತದಲ್ಲಿರುವವರು ಮೊದಲು ಭಾರತವನ್ನು ನಂಬಿ, ನೀವು ವಾಸಿಸುವ ದೇಶವನ್ನು ಪ್ರೀತಿಸಿ ಎಂದು ನಟ ತಿಳಿಸಿದ್ದಾರೆ. ಇಲ್ಲದಿದ್ದರೆ ಶೀಘ್ರದಲ್ಲೇ ನಾವು ನಿಮ್ಮನ್ನು ಭಾರತದಿಂದ ಹೊರಹಾಕುತ್ತೇವೆ ಎಂದು ಧ್ರುವ ಸರ್ಜಾ ಎಚ್ಚರಿಕೆ ನೀಡಿದ್ದಾರೆ. ಜೈ ಹಿಂದ್, ಜೈ ಶ್ರೀರಾಮ್, ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ.