Close Menu
Ain Live News
    Facebook X (Twitter) Instagram YouTube
    Thursday, May 8
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    IPL 2025: ಆರ್ ಸಿಬಿಗೆ ಮತ್ತೋರ್ವ ಕನ್ನಡಿಗ ಎಂಟ್ರಿ.. ದೇವದತ್ ಪಡಿಕ್ಕಲ್ ಔಟ್!

    By AIN AuthorMay 8, 2025
    Share
    Facebook Twitter LinkedIn Pinterest Email
    Demo

    2025ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬಲ ತೊಡೆಯ ಸ್ನಾಯುವಿನ ಗಾಯದಿಂದ ಬಳಲುತ್ತಿರುವ ಪಡಿಕ್ಕಲ್ ಈ ಋತುವಿನಲ್ಲಿ 10 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಾಯದಿಂದ 247 ರನ್ ಗಳಿಸಿದ್ದರು. ಅವರ ಬದಲಿಗೆ ಆರ್‌ಸಿಬಿ ಈಗ ಅನುಭವಿ ಬ್ಯಾಟರ್ ಮಯಾಂಕ್ ಅಗರವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ

    ಕರ್ನಾಟಕದ ಹಲವೆಡೆ ಇಂದು ಸಾಧಾರಣ ಮಳೆ: ಎಲ್ಲೆಲ್ಲಿ?

    ಇದೀಗ ಅವರ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಮಯಾಂಕ್ ಅಗರ್ವಾಲ್ 12 ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಅದರಲ್ಲೂ ಅವರು ಐಪಿಎಲ್ ಕೆರಿಯರ್ ಆರಂಭಿಸಿದ್ದು ಆರ್​ಸಿಬಿ ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. 2011 ರಲ್ಲಿ ಮಯಾಂಕ್ ಅಗರ್ವಾಲ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು.

    ಮೊದಲ ಸೀಸನ್​ನಲ್ಲಿ 8 ಪಂದ್ಯಗಳನ್ನಾಡಿದ್ದ ಮಯಾಂಕ್ 141 ರನ್​ ಕಲೆಹಾಕಿದ್ದರು. ಹೀಗಾಗಿ ಅವರನ್ನು 2012 ರಲ್ಲೂ ತಂಡದಲ್ಲೇ ಉಳಿಸಲಾಗಿತ್ತು. ಅದರಂತೆ 2012 ರಲ್ಲಿ 16 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಅವರು ಒಟ್ಟು 216 ರನ್ ಬಾರಿಸಿದ್ದರು. ಇನ್ನು 2013 ರಲ್ಲೂ ಆರ್​ಸಿಬಿ ಪರ ಕಣಕ್ಕಿಳಿದಿದ್ದ ಮಯಾಂಕ್ 5 ಪಂದ್ಯಗಳಲ್ಲಿ ಕೇವಲ 67 ರನ್​ ಮಾತ್ರ ಗಳಿಸಿದ್ದರು.

    2013 ರಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪರಿಣಾಮ ಮರು ವರ್ಷವೇ ಮಯಾಂಕ್ ಅಗರ್ವಾಲ್ ಅವರನ್ನು ಆರ್​ಸಿಬಿ ತಂಡದಿಂದ ಕೈ ಬಿಟ್ಟಿತ್ತು. ಇದಾದ ಬಳಿಕ 2014 ರಿಂದ 2016ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 2017 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್​ ತಂಡದಲ್ಲಿದ್ದ ಮಯಾಂಕ್ ಅವರು ಆ ಬಳಿಕ 2018 ರಿಂದ 2022 ರವರೆಗೆ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು.

    2023 ಹಾಗೂ 2024 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಕನ್ನಡಿಗ ಆರ್​ಸಿಬಿ ತಂಡಕ್ಕೆ ರಿಎಂಟ್ರೆ ಕೊಟ್ಟಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    Operation sindoor: ಕೇಂದ್ರ ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸುತ್ತೇವೆ: ಸಿಎಂ ಸಿದ್ದು ಹೇಳಿದ್ದಿಷ್ಟು..!

    May 8, 2025

    ಉಸಿರಾಟದಲ್ಲಿ ಸೀಟಿ ಕೇಳಿದ ವೈದ್ಯರು: ಅಪರೂಪದ ಚಿಕಿತ್ಸೆ ನೀಡಿ ಬದುಕು ಉಳಿಸಿದರು

    May 8, 2025

    ಕಾಂಗ್ರೆಸ್ ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಬಾರದು: ಬಿ.ವೈ ವಿಜಯೇಂದ್ರ ವಾಗ್ದಾಳಿ

    May 8, 2025

    IPL 2025: KKR ವಿರುದ್ಧ ಗೆದ್ದು ಬೀಗಿದ CSK: ಗೆಲುವಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮೌನ ಮುರಿದ ಕ್ಯಾಪ್ಟನ್ ಧೋನಿ‌!

    May 8, 2025

    ಹೆಬ್ಬಾಳ-ಏರ್‌ ಪೋರ್ಟ್‌ ಗೆ ಹೊಸ ಫ್ಲೈಓವರ್‌ ನಿರ್ಮಾಣ: ಗಡ್ಕರಿ ಬಳಿ ಕೇಂದ್ರದ ನೆರವು ಕೇಳಿದ ಡಿಕೆಶಿ

    May 8, 2025

    Credit Card: ಪೇ ಸ್ಲಿಪ್ ಇಲ್ಲದೆ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

    May 8, 2025

    Gold Silver Price Today: ಮತ್ತೆ ಏರಿದ ಚಿನ್ನದ ದರ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ – ಬಂಗಾರ ಬೆಲೆ ಹೀಗಿದೆ!

    May 8, 2025

    Blood Sugar Level: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದ್ರೆ ಏನೆಲ್ಲಾ ತೊಂದರೆಯಾಗುತ್ತೆ ಗೊತ್ತಾ..?

    May 8, 2025

    ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಪಿಜಿಗಳಿಗೆ ಬ್ರೇಕ್ ಹಾಕಲು ಪಾಲಿಕೆ ಸಜ್ಜು!

    May 8, 2025

    ಕರ್ನಾಟಕದ ಜಲಾಶಯಗಳಿಗೆ ಬಿಗಿ ಭದ್ರತೆ ಒದಗಿಸಲು ಸರ್ಕಾರ ಆದೇಶ!

    May 8, 2025

    Crime News: ಪಕ್ಕದ ಮನೆಯವರ ಜಗಳಕ್ಕೆ 8 ವರ್ಷದ ಬಾಲಕನ ಕೊಲೆ!

    May 8, 2025

    ಕರ್ನಾಟಕದ ಹಲವೆಡೆ ಇಂದು ಸಾಧಾರಣ ಮಳೆ: ಎಲ್ಲೆಲ್ಲಿ?

    May 8, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.