ಹುಬ್ಬಳ್ಳಿ:ರಾಜ್ಯ ಬಣಜಿಗ ಸಮಾಜ ಪದಾಧಿಕಾರಿಗಳ ಆಯ್ಕೆಯನ್ನ ಮಾಡಲಾಗಿದ್ದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ) ರಾಜ್ಯಾಧ್ಯಕ್ಷರಾಗಿ ವಿಜಯಪುರ ನಗರದ ರೂಡಗಿ ಹಾಗೂ ಉಪಾಧ್ಯಕ್ಷರಾಗಿ ಶೇಖರ ಕವಳಿ,ಅಂದಪ್ಪ ಜವಳಿ,ಪುನೀತ್, ಮಹೇಶ ಲಂಬಿ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇನ್ನು ಪ್ರಧಾನ ಕಾರ್ಯದರ್ಶಿ ಆಗಿ ಶಿವಾನಂದ ಬಿದರಿ,ಕಾರ್ಯದರ್ಶಿಯಾಗಿ ಪ್ರಶಾಂತ ನಿಗಡಿ, ಖಜಾಂಚಿಯಾಗಿ ಅಜ್ಜಂಪೂರಶೆಟ್ರ ವಿಜಯಕುಮಾರ್, ರಾಜು ಕೊಳಗಲಿ,ಸಂಘಟನಾ ಕಾರ್ಯದರ್ಶಿಯಾಗಿ ಕಾಂಚನಕುಮಾರ,ಮಲಕಪ್ಪಾ ಪಾಟೀಲ್, ಸಹ ಕಾರ್ಯದರ್ಶಿಯಾಗಿ ಸಿದ್ದರಾಮಪ್ಪ ಶಿರೋಳ,ಚೆನ್ನಪ್ಪ ಶೆಟ್ಟರ್ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ಅಭಿನಂದನೆ: ನೂತನ ಪದಾಧಿಕಾರಿಗಳನ್ನ ಹಾಗೂ ತಮ್ಮನ್ನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹಾಗೂ ಸಮಾಜದ ನಾಯಕರಿಗೆ ಅಭಿನಂದನೆಯನ್ನ ಶೇಖರ ಕವಳಿ ತಿಳಿಸಿದ್ದಾರೆ