ಕೋಲಾರ: ಪಾಕಿಸ್ತಾನ ಉಗ್ರರ ವಿರುದ್ಧ ನಡೆಯುತ್ತಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಯಶಸ್ಸು ಸಿಗಲಿ ಎಂದು ತಾಯಿ ಕೋಲಾರಮ್ಮ ಬಳಿ ಪ್ರಾರ್ಥನೆ ಮಾಡಿದ್ದೇನೆ. ಆದರೆ, ಕಾಂಗ್ರೆಸ್ ನ ದ್ವಂದ್ವ ಮತ್ತು ದೇಶ ವಿರೋಧಿ ನೀತಿಯಿಂದ ಉಗ್ರಗಾಮಿಗಳು ಅಟ್ಟಹಾಸದಿಂದ ಮೆರೆಯುತಿದ್ದಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಉಗ್ರರ ಮೇಲೆ ಸೇನಾ ದಾಳಿ ಆರಂಭವಾಗಿದೆ. ಆದರೆ ಕಾಂಗ್ರೆಸ್ ನ ನೀತಿಯಿಂದಲೇ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಹಿಂದು ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದಾರೆ. ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಮೋದಿಯವರ ದಿಟ್ಟ ನಾಯಕತ್ವದಿಂದ ಇವತ್ತು ನಮ್ಮ ದೇಶದ ಯೋಧರಿಗೆ ದೊಡ್ಡ ಶಕ್ತಿ ತಂದುಕೊಟ್ಟಿದ್ದಾರೆ. ಹಾಗಾಗಿ ಇಂದು ಯೋಧರು ನಿರ್ಭೀತಿಯಿಂದ ಉಗ್ರಗಾಮಿಗಳ ವಿರುದ್ದ ಹೋರಾಟ ಮಾಡುತಿದ್ದಾರೆ ಎಂದಿದ್ದಾರೆ.
ಉಗ್ರಗಾಮಿಗಳ ವಿರುದ್ದ ಹೋರಾಟದಲ್ಲಿ ಯಶಸ್ಸು ಸಿಗುತ್ತದೆ ಎಂದು ಬಿಜೆಪಿಗೆ ಸಂಪೂರ್ಣ ವಿಶ್ವಾಸ ಇದೆ. ಕಾಂಗ್ರೆಸ್ ಗೆ ಒಂದು ಎಚ್ಚರಿಕೆ ಕೊಡಲು ಇಚ್ಚಿಸುತ್ತೇನೆ. ಇಂತಹ ಯುದ್ದದ ಸಂದರ್ಭದಲ್ಲಿ ಎಲ್ಲರು ಒಗ್ಗಟ್ಡಾಗಿ ಬೆಂಬಲಿಸುತಿದ್ದಾರೆ. ಆದರೆ ಕಾಂಗ್ರೆಸ್ ನವರು ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಬಾರದು. ದೇಶದ ಪರ ಗಟ್ಟಿಯಾಗಿ ನಿಲ್ಲಬೇಕು.
ಯುದ್ದದ ಸಂಸದರ್ಭದಲ್ಲಿ ಟ್ವೀಟ್ ನಲ್ಲಿ ಕಾಂಗ್ರೆಸ್ ನವರ ಶಾಂತಿ ಸ್ಥಾಪನೆ ನಿಲುವು ಸರಿಯಲ್ಲ. ಇದನ್ನು ಬದಿಗಿಟ್ಟು ಸೈನಿಕರ ಪರವಾಗಿ ನಿಲ್ಲಬೇಕು. ಈ ಯುದ್ದದಲ್ಲಿ ಭಾರತಕ್ಕೆ ವಿಜಯ ಸಿಗಬೇಕು ಉಗ್ರಗಾಮಿಗಳು ಇಡೀ ಜಗತ್ತಿಗೆ ಮಾರಕವಾಗಿ ರಕ್ತದೋಕುಳಿ ನಡೆಸುತಿದ್ದಾರೆ. ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುವ ದಿಟ್ಟ ನಿರ್ಧಾರವನ್ನು ಮೋದಿಯವರು ತೆಗೆದುಕೊಂಡಿದ್ದಾರೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.