ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅವರ ಮದುವೆ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಅವರ ತಾಯಿ ಮಗಳ ಮದುವೆ ಮಾಡಲು ಸಜ್ಜಾಗಿದ್ದರು. ಇತ್ತೀಚೆಗೆ ಚೈತ್ರಾ ಕೂಡು ಮದುವೆ ಕಾರ್ಡ್ ಹಿಡಿದು ಓಡಿದ್ದ ವಿಡಿಯೋ ವೈರಲ್ ಆಗಿತ್ತು.ಇದೀಗ ಚೈತ್ರಾ ಕುಂದಾಪುರ ಕೈಯಲ್ಲಿ ಗೋರಂಟಿ ಹಾಕಿಸಿಕೊಂಡು ಹಸೆಮಣೆ ಏರಲು ರೆಡಿಯಾಗಿದ್ದಾರೆ.
ಮೆಹಂದಿ ಶಾಸ್ತ್ರದಲ್ಲಿ ಮಿಂಚಿರುವ ಚೈತ್ರಾ ಕುಂದಾಪುರ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮೇ 9ರಂದು ಅವರ ಊರು ಕುಂದಾಪುರ ಅವರ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
View this post on Instagram
ಪ್ರೀತಿಸಿ ಕೈ ಹಿಡಿಯುತ್ತಿರುವ ಚೈತ್ರಾ?
ʻಮಜಾ ಟಾಕೀಸ್ʼ ಶೋಗೆ ಬಂದಾಗ ಚೈತ್ರಾ ಕುಂದಾಪುರ ತಮ್ಮ ಪ್ರೀತಿ ಬಗ್ಗೆ ಸಣ್ಣದಾಗಿ ಇಂಟ್ ಕೊಟ್ಟಿದ್ದರು. 12 ವರ್ಷಗಳ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಯಾರು ಆ ಹುಡ್ಗ ಎಂದು ಹೇಳಿಲ್ಲ. ಕಾಲೇಜಿನಲ್ಲಿ ಶುರುವಾದ ಪ್ರೀತಿ ಎಂದಿದ್ದರು. ಇದೀಗ ಅವರು ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.