ಪಾಪಿ ಪಾಕಿಸ್ತಾನ ಮತ್ತೆ ಇಡೀ ಜಗತ್ತಿನ ಎದುರು ಬೆತ್ತಲಾಗಿದೆ. ಆಪರೇಷನ್ ಸಿಂಧೂರ ಬೆನ್ನಲ್ಲೇ ಭಾರತ ಮೇಲೆ ಮತ್ತೆ ದಾಳಿ ಮಾಡುವ ವಿಫಲ ಪ್ರಯತ್ನ ಮಾಡಿ ಕೈಸುಟ್ಟುಕೊಂಡಿದೆ. ನಿನ್ನೆ ಮಧ್ಯರಾತ್ರಿ ದೇಶದ 15 ನಗರದ ಮೇಲೆ ಟಾರ್ಗೆಟ್ ಮಾಡಿ ಸೋತು ಹೋಗಿದೆ. ಈ 15 ನಗರದ ಪೈಕಿ ಪಂಜಾಬ್ನ ಅಮೃತಸರ ಬಳಿ ಕ್ಷಿಪಣಿ ಅಟ್ಯಾಕ್ಗೆ ಪ್ರಯತ್ನಿಸಿತ್ತು. ಆದರೆ ಏರ್ ಡಿಫೆನ್ಸ್ ಸಿಸ್ಟಮ್ಗೆ ಗೊತ್ತಾಗಿದೆ. ಕೂಡಲೇ ಅಲರ್ಟ್ ಆದ ಸೇನೆ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಹೊಡೆದು ಹಾಕಲಾಗಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಕಂಗಾಲಾಗಿರುವ ಪಾಪಿ ಪಾಕಿಸ್ತಾನದ ಹೇಯಕೃತ್ಯ ಮತ್ತೆ ಮುಂದುವರೆದಿದೆ. ಅಮೃತಸರದ ಸ್ವರ್ಣ ಮಂದಿರದ ಮೇಲೆ ದಾಳಿ ಮಾಡಲು ಮೊಂಡು ಧೈರ್ಯವನ್ನು ಪಾಕ್ ಸೇನೆ ಪ್ರದರ್ಶಿಸಿದೆ. ಪಾಕಿ ಪಾಕಿಸ್ತಾನಿ ಸೇನೆ ಪವಿತ್ರ ಸ್ಥಳವನ್ನು ಮುಟ್ಟ ಹಾಕುವ ಕಾರ್ಯವನ್ನು ಭಾರತೀಯ ಸಶಸ್ತ್ರ ಪಡೆ ವಿಫಲಗೊಳಿಸಿದೆ.
ಈ ಹಿಂದೆ ನಡೆದಿದ್ದು ದಾಳಿ?
ಜೂನ್ 1984 ರಲ್ಲಿ, ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಎಂದು ಕರೆಯಲ್ಪಡುವ ಹರ್ಮಂದಿರ್ ಸಾಹಿಬ್ ಮೇಲೆ ಮತ್ತು ಪಂಜಾಬ್‌ನಾದ್ಯಂತ 40 ಕ್ಕೂ ಹೆಚ್ಚು ಇತರ ಗುರುದ್ವಾರಗಳ (ಸಿಖ್ ಪೂಜಾ ಸ್ಥಳಗಳು) ಮೇಲೆ ದಾಳಿ ಮಾಡಿತು. “ಆಪರೇಷನ್ ಬ್ಲೂ ಸ್ಟಾರ್” ಎಂಬ ಸಂಕೇತನಾಮದ ಈ ದಾಳಿಗಳು ಗುರುದ್ವಾರಗಳ ಒಳಗೆ ಸಿಲುಕಿಕೊಂಡಿದ್ದ ಸಾವಿರಾರು ನಾಗರಿಕರನ್ನು ಕೊಂದಿದ್ದರು.
ಗೋಲ್ಡನ್ ಟೆಂಪಲ್ ಇತಿಹಾಸ?
ಇದು ದೇಶದ ಅತ್ಯಂತ ಜನಪ್ರಿಯ ಗುರುದ್ವಾರಗಳಲ್ಲಿ ಒಂದಾಗಿದೆ. ಭಾರತದ ಅತ್ಯಂತ ಶ್ರೀಮಂತವಾದ ದೇವಾಲಯಗಳಲ್ಲಿ ಸಿಖ್ ಧರ್ಮದ ಗೋಲ್ಡನ್ ಟೆಂಪಲ್ ಕೂಡ ಒಂದು. ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ದೇಶದ ಜನರನ್ನೇ ಅಲ್ಲದೆ, ವಿದೇಶಿಗರನ್ನು ಸೆಳೆಯುವ ಆಕರ್ಷಣೆಯನ್ನು ಹೊಂದಿದೆ. ಗೋಲ್ಡನ್ ಟೆಂಪಲ್ ಹೆಸರೇ ಸೂಚಿಸುವಂತೆ ಆಲಯನ್ನು ಚಿನ್ನದಿಂದ ಮುಚ್ಚಲಾಗಿದೆ. ಅಂದರೆ ಸುಮಾರು 2 ಶತಮಾನಗಳ ನಂತರ ಆಲಯವನ್ನು ಮಹಾರಾಜ ರಂಜಿತ್ ಸಿಂಗ್ ಚಿನ್ನದಿಂದ ಅಲಂಕರಿಸಲು ನಿರ್ಧರಿಸಿದರು. ಮೊದ ಮೊದಲು 162 ಕೆಜಿ 24 ಕ್ಯಾರಟ್ ಚಿನ್ನದಿಂದ ಮಾಡಲಾಯಿತು. 90 ರ ದಶಕದಲ್ಲಿ 500 ಕೆಜಿ ಚಿನ್ನದ ಹಾಳೆಯನ್ನು ದೇವಾಲಯದ ಹೊರಾಂಗಣಕ್ಕೆ ಬಳಸಲಾಯಿತು.
ಪ್ರವಾಸಿಗರು ಟಾರ್ಗೆಟ್?
ಭಾರತದ ಪ್ರಮುಖ ದೇವಾಲಯಗಳಲ್ಲಿ ಪಂಜಾಬ್ ಅಮೃತ್‌ಸರದ ಗೋಲ್ಡನ್ ಟೆಂಪಲ್ ಕೂಡಾ ಒಂದು. ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಭಕ್ತರು ಈ ಸ್ಥಳಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಇದು ಸಿಖ್ ಧರ್ಮದ ಅತ್ಯಂತ ಪವಿತ್ರ ಯಾತ್ರಾ ಸ್ಥಳ. ಈ ಗೋಲ್ಡನ್ ಟೆಂಪಲನ್ನು ಶ್ರೀ ಹರ್ಮಂದಿರ್ ಸಾಹಿಬ್ ಎಂದೂ ಕರೆಯುತ್ತಾರೆ. ಸ್ವರ್ಣಮಂದಿರದ ಬಳಿ ಇರುವ ಕೊಳವನ್ನು ಅಮೃತ ಸರೋವರ ಎಂದು ಕರೆಯಲಾಗುತ್ತದೆ. ಇಲ್ಲಿ ಸ್ನಾನ ಮಾಡುವವರಿಗೆ ಆಧ್ಯಾತ್ಮಿಕ ಪ್ರಯೋಜನಗಳು ದೊರಕುತ್ತವೆ, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಈ ಪವಿತ್ರ ಸ್ಥಳಕ್ಕೆ ಸಿಖ್ ಸಮುದಾಯದವರು ಮಾತ್ರವಲ್ಲದೆ ಇತರ ಧರ್ಮದವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ದೇವಾಲಯದ ಸಮುಚ್ಚಯಕ್ಕೆ ಕಾಲಿಟ್ಟ ತಕ್ಷಣ ಬೇರೆಲ್ಲೂ ಕಾಣದ ಪ್ರಶಾಂತತೆಯ ಅನುಭವವಾಗುತ್ತದೆ. ಪ್ರತಿದಿನ ತಿರುಪತಿಗೆ ಅನೇಕ ಭಕ್ತರು ನಿಯಮಿತವಾಗಿ ಭೇಟಿ ನೀಡುವಂತೆಯೇ ಈ ಗುರುದ್ವಾರಕ್ಕೆ ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ ಪಾಕ್ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಅಮೃತಸರದ ಮೇಲೆ ದಾಳಿಗೆ ಯತ್ನಿಸಿರಬಹುದು.