ಬೆಂಗಳೂರು: ಕೈಗಾರಿಕೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಕಡೆ ಭದ್ರತೆ ಮುಖ್ಯವಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ.
ಹೀಗಾಗಿ ಎಲ್ಲ ಕಡೆ ಭದ್ರತೆ ಮುಖ್ಯವಾಗುತ್ತದೆ. ಕೇಂದ್ರ, ರಾಜ್ಯ ಸರ್ಕಾರ ಒಗ್ಗಟ್ಟಾಗಿ ಕ್ರಮ ಕೈಗೊಳುತ್ತದೆ. ರಾಜಕೀಯ, ಪಕ್ಷ ಭೇದ ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ನಾವು ಕೇಂದ್ರದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದರು. ಎಲ್ಲಾ ಇಲಾಖೆಯಲ್ಲೂ ಭದ್ರತೆಗೆ ಬೇಕಾದ ಸಂಖ್ಯೆ ಇದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ಅಡಿಷನಲ್ ಆಗಿ ನೇಮಕಾತಿ ಮಾಡಿಕೊಂಡರೆ ಒಂದು ವರ್ಷ ಟ್ರೈನಿಂಗ್ ಆಗಬೇಕು. ನಿನ್ನೆ ಮಾಕ್ ಡ್ರಿಲ್ ಸಂಬಂಧ ಕೇಂದ್ರದಿಂದ ಸೂಚನೆ ಬಂದಿತ್ತು. ಮೂರು ಜಿಲ್ಲೆಯಲ್ಲಿ ಮಾಡುವಂತೆ ಸೂಚನೆ ಬಂದಿತ್ತು. ಹೆಚ್ಚುವರಿಯಾಗಿ ಮೈಸೂರು ಆಯ್ಕೆ ಮಾಡಿಕೊಂಡಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದೇವೆ. ಎಸ್ಪಿಗಳಿಗೆ ಭದ್ರತೆ ಬಗ್ಗೆ ಸೂಚಿಸಿದ್ದೇವೆ ಎಂದು ತಿಳಿಸಿದರು.