ಬಾಗಲಕೋಟ: ಪಾಕಿಸ್ತಾನದ 9 ಉಗ್ರರ ತಾಣಗಳನ್ನು ಭಾರತೀಯ ಸೈನಿಕರು ದ್ವಂಸ ಮಾಡಿದ್ದಾರೆ. ಈ ಬಗ್ಗೆಸಿಎಂ ಸಿದ್ದರಾಮಯ್ಯ ಹಣೆಗೆ ಕುಂಕುಮ ಹಚ್ಚಿಕೊಂಡು ಸುದ್ದಿಗೋಷ್ಠಿ ನಡೆಸಿದ್ದನ್ನು ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಾಲೆಳೆದಿದ್ದಾರೆ.
ಸಿದ್ದರಾಮಯ್ಯ ಒಬ್ಬ ಕಲಾವಿದರು. ಸಿಎಂ ಹಾಗೂ ಕಾಂಗ್ರೆಸ್ ನ ಕೆಲ ನಾಯಕರು ಕಲಾವಿದರು ಇದ್ದಾರೆ. ಹಿಂದೆ ಬಾಲಾಕೋಟ್ ದಾಳಿ ಮಾಡಿದಾಗ ಕಾಂಗ್ರೆಸ್ ನವರು ಪ್ರತಿಯೊಂದಕ್ಕೂ ಆಧಾರ ಕೇಳ್ತಿದ್ರು. ಆದರೆ, ನಿನ್ನೆ ಯಾಕೋ ಆಧಾರ ಕೇಳಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಸಂಪೂರ್ಣ ತೀರಸ್ಕಾರ ಮಾಡದ ಹೊರತು ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲ್ಲ. ಎಐಸಿಸಿ ಅಧ್ಯಕ್ಷರು, ಸರ್ವಜ್ಞನ ಮೀರಿಸುವ ಕೆಲ ಮಂತ್ರಿ (ಸಚಿವ ಆರ್ ಬಿ. ತಿಮ್ಮಾಪುರ) ಜಿಲ್ಲೆಯಲ್ಲಿ ಇದ್ದಾರೆ. ಅವರು ಯಾವ ರೀತಿ ಹೇಳಿಕೆ ಕೊಟ್ಟಿದ್ರು ಗೊತ್ತಲ್ಲ ಎಂದು ಕಾರಜೋಳ, ಕಾಂಗ್ರೆಸ್ ಹೈಕಮಾಂಡ್ ಎಲ್ಲರನ್ನು ಸೈಲೆಂಟ್ ಮಾಡಿದ್ದಾದೆ ಎಂದು ಲೇವಡಿ ಮಾಡಿದ್ದಾರೆ.
Operation Sindoor: ನಾಳೆ ಕಾಂಗ್ರೆಸ್ ನಿಂದ ಬೆಂಗಳೂರಿನಲ್ಲಿ ಬೃಹತ್ ತಿರಂಗಾಯಾತ್ರೆ
ಪ್ರಧಾನಿ ಮೋದಿ ಪಾಕ್ ವಿರುದ್ದ ಇನ್ನೂ ಅನೇಕ ವಿಚಾರ ಇಟ್ಟುಕೊಂಡಿದ್ದಾರೆ. ಪಾಕ್ ಗೆ ಬುದ್ದಿ ಕಲಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗಲಿ,
ಉಗ್ರ ಚಟುವಟಿಕೆ ಮಟ್ಟ ಹಾಕುವ ಶಕ್ತಿಯನ್ನು ಭಗವಂತ ಮೋದಿ ಅವರಿಗೆ ಕೊಡಲಿ ಎಂದಿದ್ದಾರೆ..
ಕಮಾಂಡರ್ ಖುರೇಶಿ ಬೆಳಗಾವಿ ತಾಲೂಕಿನ ಕೊಣ್ಣೂರಿನ ಸೊಸೆ ಎನದನುವುದು ನಮಗೆಲ್ಲ ಹೆಮ್ಮೆ ಎಂದು ಸಂಸದ ಗೋವಿಂದ ಕಾರಜೋಳ ಸಂಸತ ವ್ಯಕ್ತಪಡಿಸಿದ್ದಾರೆ.