ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ನಿಲ್ಲಿಸಲಾಗಿದೆ.
ಆಪರೇಷನ್ ಸಿಂಧೂರ: ಇದು ಆರಂಭ ಅಷ್ಟೇ.. ರಾಜನಾಥ್ ಸಿಂಗ್ ಮಹತ್ವದ ಸುಳಿವು!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಟೀಮ್ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಓಪನರ್ ಆಗಿ ಕ್ರೀಸ್ಗೆ ಬಂದಿದ್ದ ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ಅದ್ಭುತ ಬ್ಯಾಟಿಂಗ್ ಮಾಡಿದ್ದರು. ತಂಡದ ಮೊತ್ತ 122 ರನ್ ಆಗಿದ್ದಾಗ ಪ್ರಿಯಾಂಶ್ ಆರ್ಯ ವಿಕೆಟ್ ಒಪ್ಪಿಸಿದ್ದರು.
ಪಂಜಾಬ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಪ್ರಿಯಾಂಶ್ ಆರ್ಯ ಕೇವಲ 34 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ಗಳಿಂದ 70 ರನ್ ಗಳಿಸಿ ಔಟ್ ಆಗಿದ್ದರು. ಆದ್ರೆ ಇನ್ನೊಂದೆಡೆ ಕ್ರೀಸ್ನಲ್ಲಿ ಆಡುತ್ತಿದ್ದ ಪ್ರಭಸಿಮ್ರನ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಹೀಗಾಗಿಯೇ ಕೇವಲ 28 ಎಸೆತಗಳಲ್ಲಿ 7 ಬೌಂಡರಿ ಸಮೇತ 50 ರನ್ಗಳನ್ನು ಪೂರೈಸಿದ್ದರು.
ಪಂಜಾಬ್ ತಂಡ 1 ವಿಕೆಟ್ಗೆ 122 ರನ್ ಗಳಿಸಿ ಬ್ಯಾಟಿಂಗ್ ಮಾಡುವಾಗ ಸ್ಟೇಡಿಯಂನಲ್ಲಿದ್ದ ಫ್ಲಡ್ ಲೈಟ್ಸ್ಗಳನ್ನು ಇದ್ದಕ್ಕಿದ್ದಾಗೆ ಆಫ್ ಮಾಡಲಾಯಿತು. ಕೇವಲ ಒಂದು ಫ್ಲಡ್ ಲೈಟ್ ಅನ್ನು ಬಿಟ್ಟು ಉಳಿದ ಎಲ್ಲ ಫ್ಲಡ್ ಲೈಟ್ ಆಫ್ ಮಾಡಿದ್ದರಿಂದ ಅಂಪೈರ್, ಆಟಗಾರರು ಸೇರಿದಂತೆ ಎಲ್ಲರೂ ಡ್ರೆಸ್ಸಿಂಗ್ ರೂಮ್ನತ್ತ ತೆರಳಿದ್ದಾರೆ. ಫ್ಲಡ್ ಲೈಟ್ ಆಫ್ ಆಗುತ್ತಿದ್ದಂತೆ ಮ್ಯಾಚ್ ನೋಡಲು ಬಂದಿದ್ದ ಅಭಿಮಾನಿಗಳೆಲ್ಲಾ ಸ್ಟೇಡಿಯಂ ಬಿಟ್ಟು ಹೊರ ನಡೆದಿದ್ದಾರೆ. ಸದ್ಯ ಮೈದಾನದಲ್ಲಿ ಲೈಟ್ ಇಲ್ಲದ ಕಾರಣ ಕತ್ತಲು ಆವರಿಸಿದೆ.