ಹುಬ್ಬಳ್ಳಿ: ಇಲ್ಲಿನ ಕೆಎಂಸಿ-ಆರ್‌ಐ ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿನಿ ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕ ರಜತ ಎಂಬುವವನ ಜೊತೆ ವಿವಸ್ತ್ರವಾಗಿ ವಾಟ್ಸ್ಆ್ಯಪ್ ಚಾಟ್, ವಿಡಿಯೊ ಕಾಲ್ ಮಾಡಿದ್ದು, ಅದನ್ನು ರೆಕಾರ್ಡಿಂಗ್ ಮಾಡಿಕೊಂಡಿದ್ದ ಅವನು ನಕಲಿ ಖಾತೆ ತೆರೆದು ಮಾನ ಹರಾಜು ಹಾಕುತ್ತಿರುವ ಕುರಿತು ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ವಿದ್ಯಾರ್ಥಿನಿ, ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಉತ್ತರ ಪ್ರದೇಶದ ರಜತ ಶರ್ಮ ಆನ್‌ಲೈನ್‌ನಲ್ಲಿ ಪರಿಚಯವಾಗಿದ್ದು, ಕರೋಕೆ ಲಾಂಜ್ ಆ್ಯಪ್ ಮೂಲಕ ಇಬ್ಬರೂ ಹಾಡುತ್ತಿದ್ದರು. ನಂತರ ವಿಡಿಯೊ ಕಾಲ್, ವಾಟ್ಸ್‌ಆ್ಯಪ್ ಚಾಟ್, ಟೆಲಿಗ್ರಾಮ್ ವಿಡಿಯೊ, ಸ್ಕ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್, ಪಿಂಟರೆಸ್ಟ್, ಇ-ಮೇಲ್ ಮತ್ತು ಎಸ್‌ಎಂಎಸ್ ಮುಖಾಂತರ ಸಂಪರ್ಕ ಇಟ್ಟುಕೊಂಡಿದ್ದರು. ರಜತ ಒಂಬತ್ತು ವಾಟ್ಸ್‌ಆ್ಯಪ್ ನಂಬರ್‌ಗಳಿಂದ ವಿದ್ಯಾರ್ಥಿನಿ ಜೊತೆ ವಿಡಿಯೊ ಕಾಲ್ ಮತ್ತು ಚಾಟ್ ಮಾಡುತ್ತಿದ್ದನು.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ಆರೋಪಿ ರಜತ ಹೇಳಿದ ಹಾಗೆ ವಿದ್ಯಾರ್ಥಿನಿ ವಿವಸ್ತ್ರಳಾಗಿ ಮಾಡಿರುವ ವಿಡಿಯೊ ಕಾಲ್‌ಗಳ ಫೋಟೊ ತೆಗೆದು ರೆಕಾರ್ಡಿಂಗ್ ಮಾಡಿಕೊಂಡಿದ್ದನು. ನಂತರ ವಿದ್ಯಾರ್ಥಿನಿ ಹೆಸರಲ್ಲಿಯೇ ಇನ್‌ಸ್ಟಾಗ್ರಾಮ್ ನಕಲಿ ಗ್ರೂಪ್ ತೆರೆದು, ಅಶ್ಲೀಲ ಫೋಟೊ ಹಾಕಿ ‘ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ, ಚಾಟ್ ಮಾಡಿ’ ಎಂದು ಅಡಿಬರಹ ಬರೆದಿದ್ದಾನೆ. ಇ-ಮೇಲ್‌ನಲ್ಲಿ ಸಂದೇಶ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತ ಮಾನ ಹರಾಜು ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ವಿದ್ಯಾರ್ಥಿನಿ ತಿಳಿಸಿದ್ದಾರೆ.