ಬೆಂಗಳೂರು: ಪೆಹಲ್ಗಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಸೂಚನೆ ನೀಡಿದ್ದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಶೇಷಾದ್ರಿಪುರಂ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಚಿವರ ಸೂಚನೆ ಯಂತೆ ವಖ್ಫ್ ಬೋರ್ಡ್ ವ್ಯಾಪ್ತಿಯ ಮಸೀದಿಗಳು ಸೇರಿದಂತೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ದೇಶದ ಹೆಮ್ಮಯ ಸೈನಿಕರಿಗೆ ಶ್ರೇಯಸ್ಸು ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ಏಪ್ರಿಲ್ 22ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ 100 ಉಗ್ರರನ್ನು ಹತ್ಯೆ ಮಾಡಿತ್ತು
ಇದಾದ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಪ್ರತಿ ದಾಳಿ ಶುರು ಮಾಡಿತ್ತು, ಗಡಿಗಳ ಉದ್ದಕ್ಕೂ ಗುಂಡಿನ ದಾಳಿ ನಡೆಸಿದ್ದು, ಅನೇಕ ನಾಗರಿಕರನ್ನು ಹತ್ಯೆ ಮಾಡಿತ್ತು, ಹೀಗಾಗಿ ಕೋಪಗೊಂಡ ಭಾರತ ಮತ್ತೆ ಪಾಕ್ ವಿರುದ್ಧ ದಾಳಿಗೆ ನಿಂತಿದೆ.