ಬೆಂಗಳೂರು: ಮೋದಿ, ಅಮಿತ್ ಶಾ ಅವರು ಅನುಮತಿ ಕೊಟ್ರೆ ಸೂಸೈಡ್ ಬಾಂಬರ್ ಆಗಿ ಹೋಗೋಕೆ ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸೂಸೈಡ್ ಬಾಂಬರ್ಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ ಅವರು,
ಬಿಜೆಪಿ ಅವರಿಗೆ ಟೀಕೆ ಬಿಟ್ಟು ಇನ್ನೋನೂ ಗೊತ್ತಿಲ್ಲ. ನಾನು ದೇಶಕೋಸ್ಕರ ಬಲಿ ಆಗೋಕೆ ಸಿದ್ಧ ಅಂತ ಹೇಳಿದ್ದೇನೆ. ಈಗಲೂ ನನ್ನ ಮಾತಿಗೆ ನಾನು ಬದ್ಧ. ಈಗಲೂ ಹೇಳ್ತೀನಿ ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ. ಮೋದಿ, ಅಮಿತ್ ಶಾ ಅವರು ಅನುಮತಿ ಕೊಟ್ರೆ ಸೂಸೈಡ್ ಬಾಂಬರ್ ಆಗಿ ಹೋಗೋಕೆ ಸಿದ್ಧ.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ನಮ್ಮ ದೇಶಕ್ಕಾಗಿ ಈಗಲೂ ನಾನು ಸೂಸೈಡ್ ಬಾಂಬರ್ ಆಗಿ ಹೋಗ್ತೀನಿ. ಸೈನಿಕರಿಗೆ ಹೆಚ್ಚು ಶಕ್ತಿ ಕೊಡಲಿ ಅಂತ ಅಲ್ಲಾ ಬಳಿ ಬೇಡಿ ಕೊಳ್ತೀನಿ ಎಂದು ತಿಳಿಸಿದರು. ತಿರಂಗಾ ಯಾತ್ರೆಗೆ ಬಾರದ ಬಗ್ಗೆ ಮಾತನಾಡಿ, ನಾನು ತಿರಂಗಾ ಯಾತ್ರೆಗೆ ಬರಬೇಕಿತ್ತು. ಸ್ಲಂ ಬೋರ್ಡ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬರಲು ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು.