ಸಾಮಾನ್ಯವಾಗಿ ನಾವು ಕೆಲವು ತರಕಾರಿಗಳನ್ನು ಇಷ್ಟಪಡುವುದಿಲ್ಲ. ಹೀಗಾಗಿ ಮಾಡುವ ಅಡುಗೆಯಿಂದ ಅವುಗಳನ್ನು ದೂರ ಇಡುತ್ತೇವೆ. ಅದರಲ್ಲೂ ಕ್ಯಾಪ್ಸಿಕಂ ಅನ್ನು ಹೆಚ್ಚಿನವರು ದೂರ ಇಡುತ್ತಾರೆ. ಆದರೆ ಕ್ಯಾಪ್ಸಿಕಂ ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು.
ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕ್ಯಾಪ್ಸಿಕಂ ಅನ್ನು ದಪ್ಪ ಮೆಣಸಿನಕಾಯಿ ಎಂದು ಕೂಡ ಕರೆಯುತ್ತಾರೆ. ಇದನ್ನು ಹೆಚ್ಚಾಗಿ ಸಲಾಡ್, ತ್ವರಿತ ಆಹಾರ ಮತ್ತು ಇತರ ಅಡುಗೆಯಲ್ಲಿ ಸೇರಿಸಲಾಗುತ್ತದೆ. ಇದರಲ್ಲಿ ಜೀವಸತ್ವಗಳು ಸಮೃದ್ಧವಾಗಿದ್ದು, ಅನೇಕ ರೋಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆದ್ರೆ ಅಗತ್ಯಕ್ಕಿಂತ ಹೆಚ್ಚು ಕ್ಯಾಪ್ಸಿಕಂ ಸೇವಿಸುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹಾಗಾದ್ರೆ ಅತಿಯಾಗಿ ಕ್ಯಾಪ್ಸಿಕಂ ತಿನ್ನುವುದರಿಂದ ಆರೋಗ್ಯದ ಮೇಲೆ ಬೀರುವ ಅಡ್ಡಪರಿಣಾಮಗಳು ಯಾವುವು ಎಂದು ತಿಳಿಯೋಣ ಬನ್ನಿ.
ಕ್ಯಾಪ್ಸಿಕಂ ತಿನ್ನುವುದರಿಂದ ಆಗುವ ಅನಾನುಕೂಲಗಳೇನು?: ಕ್ಯಾಪ್ಸಿಕಂನ ಅತಿಯಾದ ಸೇವನೆಯು ರಕ್ತದೊತ್ತಡದ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ರಕ್ತದೊತ್ತಡ ಸಮಸ್ಯೆ ಇರುವವರು ಅತಿಯಾದ ಕ್ಯಾಪ್ಸಿಕಂ ಸೇವಿಸುವುದನ್ನು ನಿಲ್ಲಿಸಬೇಕು.
ಕ್ಯಾಪ್ಸಿಕಂ ಅತಿಯಾಗಿ ತಿನ್ನುವುದರಿಂದ ಅಲರ್ಜಿಯಂತಹ ಸಮಸ್ಯೆಯನ್ನು ಸಹ ಎದುರಿಸಬೇಕಾಗಬಹುದು. ಇದರಿಂದ ತ್ವಚೆಯ ಮೇಲೆ ದದ್ದು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು.
ರಕ್ತ ಸಂಬಂಧಿ ಸಮಸ್ಯೆ ಇರುವವರು ಅತಿಯಾದ ಕ್ಯಾಪ್ಸಿಕಂ ಸೇವಿಸುವುದನ್ನು ತಪ್ಪಿಸಬೇಕು. ಇದರ ಅತಿಯಾದ ಸೇವನೆಯು ಮಧುಮೇಹಿಗಳ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೂ ಮುನ್ನ ಮತ್ತು ನಂತರ ವ್ಯಕ್ತಿ ಕ್ಯಾಪ್ಸಿಕಂ ಅನ್ನು ಸೇವಿಸಬಾರದು. ಏಕೆಂದರೆ ಇದು ರಕ್ತಸ್ರಾವದ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು.
ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೂ ಮುನ್ನ ಮತ್ತು ನಂತರ ವ್ಯಕ್ತಿ ಕ್ಯಾಪ್ಸಿಕಂ ಅನ್ನು ಸೇವಿಸಬಾರದು. ಏಕೆಂದರೆ ಇದು ರಕ್ತಸ್ರಾವದ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು.
ಕ್ಯಾಪ್ಸಿಕಂ ದೇಹದ ಉಷ್ಣತೆಯನ್ನು ಹೆಚ್ಚಿಸಬಹುದು. ಕ್ಯಾಪ್ಸಿಕಂ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸಬಹುದು. ಹಾಗಾಗಿ ಹೀಟ್ ಬಾಡಿ ಹೊಂದಿರುವವರು ಕ್ಯಾಪ್ಸಿಕಂ ತಿನ್ನುವುದನ್ನು ನಿಲ್ಲಿಸಬೇಕು.