ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಕೊಳ್ಳೇಗಾಲ ಮಾರ್ಗಮದ್ಯೆ ಹಾದುಹೋಗಿರುವ ಚಾಮರಾಜನಗರ ಬೆಂಗಳೂರು ಬೈಪಾಸ್ ಬಳಿ ಈಚರ್ ಲಾರಿಯು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದವನ ಸ್ಥಿತಿ ಗಂಭೀರವಾಗಿದ್ದು ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಇಂದು ಮದ್ಯಾಹ್ನ 3.30 ರಲ್ಲಿ ನಡೆದಿದೆ.
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ಕಣ್ಣೂರು ಮಾರ್ಗವಾಗಿ ದಾಸನಪುರಕ್ಕೆ ತೆರಳುತ್ತಿದ್ದ ತೆಂಕಳ್ಳಿ ಗ್ರಾಮದ ಇಬ್ಬರು ಯುವಕರು ತೆರಳುತ್ತಿದ್ದ ಬೈಕಿಗೆ ಈಚರ್ ವಾಹನ ಡಿಕ್ಕಿ ಹೊಡೆದಿದೆ.ತೆಂಕಳ್ಳಿ ಗ್ರಾಮದ ಹರಿ ಹಾಗೂ ನವೀನ್ ಎಂಬುಬವರಿಗೆ ಅಪಘಾತದಲ್ಲಿ ಗಾಯಗಳಾಗಿದೆ.
Tn .50bu 2031 ಈಚರ್ ವಾಹನ Ka.51hu.2730 ಬೈಕಿಗೆ ಗುದ್ದಿದ ರಭಸಕ್ಕೆ ಬೈಕ್ ಸವಾರ ನೀರಿನ ಪಾಲದ ಮೇಲೆ ಜಿಗಿದು ಬಿದ್ದರೆ ಬೈಕಿನ ಹಿಂಬದಿ ಸವಾರ ನವೀನ್ ನೀರಿನ ಹಳ್ಳಕ್ಕೆ ಸಿನಿಮೀಯಾ ಮಾದರಿ ಹಾರಿ ಬಿದ್ದು ಗಂಭೀರಸ್ವರೂಪದ ಗಾಯಗಳಾಗಿರುವ ಘಟನೆ ನಡೆದಿದೆ.
ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಟ್ಟರು. ಕೊಳ್ಳೇಗಾಲ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.