ಹುಬ್ಬಳ್ಳಿ: ಇಂದು ನಗರಕ್ಕೆ ಆಗಮಿಸಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರಕರ್ತರೊಂದಿಗೆ ಮಾತನಾಡಿ ಪಾಕಿಸ್ತಾನ ಭಾರತ ಯುದ್ದದ ಸಂದರ್ಭ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯ ದಂತೆ ಕ್ರಮ ಕೈಗೊಂಡಿದ್ದು
ಶಾಂತಿ ಕಾಪಾಡುವ ಎಲ್ಲ ಕಾರ್ಯಕ್ರಮಗಳನ್ನ ಮಾಡುತ್ತೇವೆ ಭಾರತ ದೇಶ 140 ಕೋಟಿ ಜನಸಂಖ್ಯೆ ಹೊಂದಿದ್ದು
ಎಲ್ಲರೂ ಒಕ್ಕಟ್ಟಾಗಿ ವಿರೋಧಿಗಳನ್ನ ಎದುರಿಸುತ್ತಾ ಇದ್ದೇವೆ.ಈ ನಿಟ್ಟಿನಲ್ಲಿ ಎಲ್ಲರ ಮನಸ್ಸು ಉದ್ದೇಶ ಒಂದಾಗಿದೆ.
ಯುದ್ಧಕ್ಕೆ ಸಂದರ್ಭದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವಿಚಾರವು ದೇಶದ್ರೋಹ ವಿಚಾರ ವಾಗಿದೆ ಎಂದರು.ನಿನ್ನೆ ಸಚಿವ ಸಂಪುಟದಲ್ಲಿ ಜಾತಿ ಗಣತಿ ವರದಿ ಜಾರಿ ಹಿನ್ನೆಲೆ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಗೆ ಸುದೀರ್ಘವಾದ ಚರ್ಚೆ ಆಗಿದೆ.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಮುಖ್ಯಮಂತ್ರಿಗಳು ಮತ್ತೇ ಚರ್ಚೆಗೆ ತೆಗೆದುಕೊಂಡಿದ್ದರು. ಈಗಾಗಲೇ ಕೇಲ ಸಚಿವರು ಲಿಖಿತವಾಗಿ ಅಭಿಪ್ರಾಯ ತಿಳಿಸಿದ್ದಾರೆ
ಇನ್ನೂ ಹಲವಾರು ಸಚಿವ ಸಂಪುಟದ ಸದಸ್ಯರು ಅಭಿಪ್ರಾಯ ಕೊಡಬೇಕಾಗಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಏನೆಲ್ಲಾ ಆಗಿದೆ ಎಂಬ ಮಾಹಿತಿ ಕೊಡಲಾಗಿದೆ. ಈಗ ಏನೇನು ಆಗಬೇಕು ಎಂಬ ಕುರಿತು ಸಹ ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.