ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಸಂದರ್ಭದಲ್ಲಿ, ಪಾಕ್ ಕಡೆಯಿಂದ ಹರಡಲಾಗುತ್ತಿರುವ ಸುಳ್ಳು ಪ್ರಚಾರಗಳನ್ನು ಭಾರತೀಯ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳು ಖಂಡಿಸಿವೆ. ಇದೀಗ ಭಾರತೀಯ ಸೇನೆಯು ಮೇ 8 ಮತ್ತು 9 ರಂದು ರಾತ್ರಿ ನಿಯಂತ್ರಣ ರೇಖೆಯ ಬಳಿಯಿದ್ದ ಪಾಕಿಸ್ತಾನದ ಲಾಂಚ್‌ಪ್ಯಾಡ್‌ಗಳನ್ನುಧ್ವಂಸಗೊಳಿಸಿದ ವೀಡಿಯೋವನ್ನು ಸೇನೆಯು ಎಡಿಜಿಪಿಐ ಇಂಡಿಯನ್ ಆರ್ಮಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಗಡಿ ನಿಯಂತ್ರಣ ರೇಖೆಯ ಸಮೀಪವಿರುವ ಲಾಂಚ್‌ಪ್ಯಾಡ್‌ಗಳ ಮೂಲಕವೇ ಪಾಕಿಸ್ತಾನದ ಉಗ್ರರು ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ದಾಳಿಯನ್ನು ಯೋಜಿಸುತ್ತಿದ್ದರು. ಭಾರತೀಯ ಸೇನೆಯು ಪಾಕ್ ಉಗ್ರರ ಈ ನೆಲೆಯನ್ನು ಉಡೀಸ್ ಮಾಡುವ ಮೂಲಕ ತಕ್ಕ ಉತ್ತರ ನೀಡಿದೆ.
ಭಾರತೀಯ ಸೇನೆಯು ಭಯೋತ್ಪಾದಕ ಉಡಾವಣಾ ನೆಲೆಗಳನ್ನು ಪುಡಿಪುಡಿ ಮಾಡಿದೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನ ಹಲವಾರು ನಗರಗಳಲ್ಲಿ 2025ರ ಮೇ 8 ಮತ್ತು 9ರಂದು ರಾತ್ರಿ ಪಾಕಿಸ್ತಾನ ಡ್ರೋನ್ ದಾಳಿಗೆ ಯತ್ನಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಭಯೋತ್ಪಾದಕ ಉಡಾವಣಾ ನೆಲೆಗಳ ಮೇಲೆ ಸಂಘಟಿತ ಗುಂಡಿನ ದಾಳಿ ನಡೆಸಿ, ಅವುಗಳನ್ನು ಪುಡಿಪುಡಿ ಮಾಡಿ ನಾಶಮಾಡಿತು.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ನಿಯಂತ್ರಣ ರೇಖೆಯ ಬಳಿ ಇರುವ ಭಯೋತ್ಪಾದಕ ಉಡಾವಣಾ ನೆಲೆಗಳು, ಹಿಂದೆ ಭಾರತೀಯ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವ ಕೇಂದ್ರವಾಗಿತ್ತು. ಭಾರತೀಯ ಸೇನೆಯ ತ್ವರಿತ ಮತ್ತು ನಿರ್ಣಾಯಕ ಕ್ರಮವು ಭಯೋತ್ಪಾದಕ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳಿಗೆ ಗಮನಾರ್ಹ ಹೊಡೆತ ನೀಡಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.