ಬೆಳಗಾವಿ : ಬೆಳಗಾವಿಯ ರಂಗಸೃಷ್ಟಿ ತಂಡದ ಕಲಾವಿದರಿಂದ ಮೇ 10ರಂದು ಸಂಜೆ 7 ಗಂಟೆಗೆ ನೆಹರು ನಗರದ ಕನ್ನಡ ಭವನದಲ್ಲಿ ಇಳೆಯ ಬೆಳಕು (ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ) ನಾಟಕ ಪ್ರದರ್ಶನ ನಡೆಯಲಿದೆ.
ಡಾ.ರಾಮಕೃಷ್ಣ ಮರಾಠೆ ರಚಿಸಿರುವ ನಾಟಕವನ್ನು ಶಿರೀಶ್ ಜೋಶಿ ನಿರ್ದೇಶಿಸಿದ್ದಾರೆ. ರಡ್ಡಿ ಸಂಘ ಹಾಗೂ ಕನ್ನಡ ಭವನದ ಸಹಯೋಗದಲ್ಲಿ ನಡೆಯಲಿರುವ ಈ ನಾಟಕದ ಪ್ರಯೋಜಕತ್ವವನ್ನು ರಂಗಸೃಷ್ಟಿ ಅಧ್ಯಕ್ಷರೂ ಆಗಿರುವ ರಮೇಶ ಜಂಗಲ್ ವಹಿಸಿಕೊಂಡಿದ್ದಾರೆ.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ಶಾಂತಾ ಆಚಾರ್ಯ, ಶಾರದಾ ಭೋಜ್ , ಶರಣಗೌಡ ಪಾಟೀಲ್, ಶರಣಯ್ಯ ಮಠಪತಿ, ಶ್ರದ್ದಾ ಪಾಟೀಲ್, ಶೋಭಾ ಬನಶಂಕರಿ, ವಿಶ್ವನಾಥ ದೇಸಾಯಿ, ಜಯಶ್ರೀ ಕೆಎಂ, ಶಾಂತಾ ಜಂಗಲ್, ರಮೇಶ್ ಮಿರ್ಜಿ ,ಡಾ. ಪಿ. ಜಿ ಕೆಂಪಣ್ಣವರ, ರಮೇಶ್ ಜಂಗಲ್, ಜಯಶ್ರೀ ಕ್ಷೀರಸಾಗರ್, ಜ್ಯೋತಿ ಬದಾಮಿ, ಶೈಲಜಾ ಭಿಂಗೆ, ಜಯಶೀಲ ಬ್ಯಾಕೋಡ, ಪುಷ್ಪಾ ಮರಡೂರ, ಗಂಗಾ ತಿಮ್ಮನಾಯ್ಕರ್ ಮತ್ತಿತರರು ಪಾತ್ರ ನಿರ್ವಹಿಸಲಿದ್ದಾರೆ.
ಶರಣಗೌಡ ಪಾಟೀಲರವರ ರಂಗಸಜ್ಜಿಕೆಯಲ್ಲಿ, ದಿವಂಗತ ನಾಟ್ಯ ಭೂಷಣ ಏಣಗಿ ಬಾಳಪ್ಪ ಸಂಗೀತ ನಿರ್ದೇಶನದಲ್ಲಿ, ವಿದುಷಿ ಮಂಜುಳಾ ಜೋಶಿ, ಮುದ್ದು ಮೋಹನ, ಮತ್ತು ದಿವಂಗತರಾದ ಶಿವಾನಂದ್ ಪಾಟೀಲ್ ಹಾಗೂ ಸುಭದ್ರಮ್ಮ ಮನ್ಸೂರ್ ಅವರ ಹಿನ್ನೆಲೆ ಗಾಯನದಲ್ಲಿ ನಾಟಕ ನಡೆಯಲಿದೆ.
ನಾರಾಯಣ ಗಣಚಾರಿ ತಬಲಾ ವಾದನ, ರಮೇಶ್ ಮಿರ್ಜಿ ಸಂಗೀತ ನಿರ್ವಹಣೆ, ಶಾಂತಾ ಆಚಾರ್ಯ ನೃತ್ಯ ಸಂಯೋಜನೆ, ರಾಜಕುಮಾರ್ ಕುಂಬಾರ್ ತಾಂತ್ರಿಕ ನೆರವು ನೀಡುತ್ತಿದ್ದಾರೆ.ನಾಟಕಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕೆಂದು ರಂಗಸೃಷ್ಟಿ ತಂಡದವರು ಮನವಿ ಮಾಡಿದ್ದಾರೆ.