ಹುಬ್ಬಳ್ಳಿ: ಭಾರತ ಮತ್ತು ಪಾಕ್ ನಡುವೆ ಯುದ್ಧದ ಕಾರ್ಮೋಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಹೈಅಲರ್ಟ್ ಮಾಡಲಾಗಿದೆ.
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲೂ ಹದ್ದಿನ ಕಣ್ಣಿರಿಸಲಾಗಿದೆ.
ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಅಧಿಕಾರಿಗಳು, ರೈಲ್ವೆ ರಕ್ಷಣಾ ಪಡೆ(RPF), ಸರ್ಕಾರಿ ರೈಲ್ವೆ ಪೊಲೀಸ್ (GRP), ಡಾಗ್ ಸ್ಕ್ವಾಡ್ ನಿಂದ ಪ್ರಯಾಣಿಕರ ಮತ್ತು ಲಗೇಜಗಳ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್, ಲಗೇಜ್ ತಪಾಸಣಾ ಸ್ಕ್ಯಾನರ್ಗಳ ಮೂಲಕ ತಪಾಸಣೆ ಮಾಡಲಾಗುತ್ತಿದೆ.
ರೈಲು ನಿಲ್ದಾಣದ ಪ್ರವೇಶ ದ್ವಾರ ಮತ್ತು ನಿರ್ಗಮನ ಕೇಂದ್ರ ಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ. ರೈಲ್ವೆ ನಿಲ್ದಾಣದೊಳಗೆ ಕೊಂಡೊಯ್ಯುವ ಲಗೇಜ್ ತಪಾಸಣೆ ಮಾಡಿ ಪ್ರತಿ ರೈಲ್ವೆ ಬೋಗಿಗಳ ಒಳ ತೆರಳಿ ಇಂಚಿಂಚೂ ಚೆಕಿಂಗ್ ಮಾಡಲಾಗ್ತಿದೆ.
ಭಾರತ-ಪಾಕ್ ಕದನಕ್ಕೆ ವಿರಾಮ: ಉಭಯ ರಾಷ್ಟ್ರಗಳ ಸಮ್ಮತಿ – ಟ್ರಂಪ್ ಘೋಷಣೆ
ಸುಮಾರು 50ಕ್ಕೂ ಹೆಚ್ಚು ಬೇರೆ ಬೇರೆ ವಿಭಾಗದ ಪೊಲೀಸರಿಂದ ನಿಲ್ದಾಣದ 10ಕ್ಕೂ ಹೆಚ್ಚು ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ಮಾಡ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರೈಲ್ವೇ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ.