ಬೆಂಗಳೂರು: ಪೆಹಲ್ಗಾಮ್ ನಲ್ಲಿ ಭಾರತೀಯರ ಹತ್ಯೆಗೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಕದನ ವಿರಾಮ ಬಿದ್ದಿದೆ.
ಆದರೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸಿಎಂ ಸಿದ್ದರಾಮಯ್ಯ, ಪೊಲೀಸರು, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದ್ದೀವಿ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿಸಿ, SP, IG ಗಳು ಸಂಪೂರ್ಣವಾಗಿ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ ಎಂದು ಸಭೆ ನಂತರ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಭಧ್ರತಾಕ್ರಮಗಳನ್ನು ತಗೊಬೇಕು, ಅಗತ್ಯ ಇರೋಕಡೆ ಮಾಕ್ ಡ್ರಿಲ್ ಮಾಡಲು ಸೂಚನೆ ಕೊಟ್ಟಿದ್ದೀವಿ. ಕೋಆರ್ಡಿನೇಷನ್ ಇರಬೇಕು ಕೇಂದ್ರದ ಅಧಿಕಾರಿಗಳು. ರಾಜ್ಯದ ಅಧಿಕಾರಿಗಳ ಜೊತೆ ಡಿಸಿಗಳು ಪ್ರತಿ ನಿತ್ಯ ಪ್ರೆಸ್ ಮೀಟ್ ಮಾಡಬೇಕು. ಏನು ನಡಿತಿದೆ ಅನ್ನೋ ಬಗ್ಗೆ ಹಾಗೂ ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಕೆಲಸ ಮಾಡಬೇಕು, ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳ ವಿರುದ್ಧ ಕ್ರಮತಗೊಬೇಕು, ಫ್ಯಾಕ್ಟ್ ಫೈಂಡಿಂಗ್ ಮಾಡಬೇಕು, ಸೋಷಿಯಲ್ ಮೀಡಿಯಾ ಮೇಲೆ ನಿಗಾ ಇಡಬೇಕು, ಆಸ್ಪತ್ರೆಗಳು, ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆ ಹೆಚ್ಚಿಸಬೇಕು. ಸಿವಿಲ್ ಡಿಫೆನ್ಸ್ ಬಲಪಡಿಸುವ ಕೆಲಸ ಮಾಡಬೇಕು. ಸಿವಿಲ್ ಡಿಫೆನ್ಸ್ ನವರಿಗೆ ತರಬೇತಿ ಕೊಡಬೇಕು. ಸಿವಿಲ್ ಡಿಫೆನ್ಸ್ ಗೆ ಯಾರು ಸೇರಿಕೊಳ್ತಾರೆ ಅವರನ್ನು ಸೇರಿಸಬೇಕು.
India-Pakistan: ಇಂದು ಸಂಜೆ 5 ಗಂಟೆಯಿಂದಲೇ ಕದಮ ವಿರಾಮಕ್ಕೆ 2 ರಾಷ್ಟ್ರಗಳು ಘೋಷಣೆ..!
ಕೋಮು ಸಾಮರಸ್ಯ ಕದಡುವ ಕೆಲಸ ಮಾಡಿದ್ರೆ ಅವರ ಮೇಲೆ ಕಠಿಣ ಕ್ರಮ ತಗೊಬೇಕು. ಕೋಮು ಗೂಂಡಾಗಳ ಮೇಲೆ ನಿಗಾ ಇಡಬೇಕು. ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಆಹಾರ ಭದ್ರತೆ ದೃಷ್ಟಿಯಿಂದ ಕಾಳ ಸಂತೆ ಮೇಲೆ ನಿಗಾ ಇಡಬೇಕು. ಅಗ್ನಿಶಾಮಕ ದಳ ಯಾವಾಗಲೂ ಅಲರ್ಟ್ ಆಗಿರಬೇಕು, ಹೆಲ್ಪ್ ಲೈನ್ ಹೆಚ್ಚು ಮಾಡಬೇಕು. 24/7 ಎಲ್ಲಾ ಅಧಿಕಾರಿಗಳು ಅಲರ್ಟ್ ಆಗಿರಬೇಕು. ಇಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದೀವಿ. ಕರಾವಳಿ, ಗಡಿ ಪ್ರದೇಶದಲ್ಲಿ ಎಚ್ಚರಿಕೆ ಕೊಟ್ಟಿದ್ದೀವಿ. ನಮ್ಮ ಸರ್ಕಾರ ಎಲ್ಲಾ ಸಹಾಯಕ್ಕೂ ಸಿದ್ದವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಭಾರತ ಪಾಕಿಸ್ತಾನ ಇಬ್ಬರು ಒಪ್ಪಿದ್ರೆ ಸಂತೋಷ. ಆದ್ರೂ ಕೂಡ ಎಚ್ಚರಿಕೆಯಿಂದ ಇರಬೇಕು. ಭಯೋತ್ಪಾದನೆಯನ್ನು ನಿಗ್ರಹ ಮಾಡುವ ಕೆಲಸ ಮಾಡಬೇಕು. ಸೀಜ್ ಫಯರ್ ಆದ್ರೂ ಕೂಡ ಭಯೋತ್ಪಾದನೆ ತೊಲಗಿಸೋ ಕಡೆ ಗಮನ ಕೊಡಬೇಕು ಎಂದು ಸೂಚಿಸಿದ್ದಾರೆ.