Close Menu
Ain Live News
    Facebook X (Twitter) Instagram YouTube
    Sunday, May 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಭಾರತ -ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಬಗ್ಗೆ ಪ್ರಧಾನಿ ಮೋದಿಗೆ ರಾಹುಲ್, ಖರ್ಗೆ ಪತ್ರ.!

    By Author AINMay 11, 2025
    Share
    Facebook Twitter LinkedIn Pinterest Email
    Demo

    ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ತಿಳಿಸಿದ್ದರು. ಇನ್ನೂ ಇದಕ್ಕೆ ಸಂಬಂಧ ಪಟ್ಟಂತೆ ಪ್ರಧಾನಿ ಮೋದಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಪತ್ರ ಬರೆದಿದ್ದಾರೆ. ಆಪರೇಷನ್ ಸಿಂಧೂರ ಮತ್ತು ಕದನ ವಿರಾಮದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮೊದಲು ಕದನ ವಿರಾಮವನ್ನು ಘೋಷಿಸಿದರು ಎಂದು ಪ್ರಶ್ನಿಸಿದ್ದಾರೆ.

    Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ

    ಪತ್ರದಲ್ಲೇನಿದೆ?
    ಆತ್ಮೀಯ ಪ್ರಧಾನ ಮಂತ್ರಿಯವರೇ, ಸಂಸತ್ತಿನ ವಿಶೇಷ ಅಧಿವೇಶನವನ್ನು ತಕ್ಷಣವೇ ಕರೆಯಬೇಕೆಂಬ ವಿರೋಧ ಪಕ್ಷದ ಸರ್ವಾನುಮತದ ವಿನಂತಿಯನ್ನು ನಾನು ಪುನರುಚ್ಚರಿಸುತ್ತೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆಯಿತು. ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಯಿತು.

    ಆದರೆ, ಇಂದಿನ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಮೊದಲು ಘೋಷಿಸಿದರು. ಇದು ಮುಂಬರುವ ಸವಾಲುಗಳನ್ನು ಎದುರಿಸಲು ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಲು ಒಂದು ಅವಕಾಶವಾಗಿದೆ. ನೀವು ಈ ಬೇಡಿಕೆಯನ್ನು ಗಂಭೀರವಾಗಿ ಮತ್ತು ತ್ವರಿತವಾಗಿ ಪರಿಗಣಿಸುತ್ತೀರಿ ಎಂದು ನಾನು ನಂಬುತ್ತೇನೆ ಎಂದು ರಾಹುಲ್‌ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    LoP Lok Sabha and LoP Rajya Sabha have just written to the PM requesting for a special session of Parliament to be convened immediately. Here are the letters pic.twitter.com/exL6H5aAQy

    — Jairam Ramesh (@Jairam_Ramesh) May 11, 2025

    ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ‘ಪಹಲ್ಗಾಮ್‌ನಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಸಂಸತ್ತಿನ ಎರಡೂ ಸದನಗಳ ವಿಶೇಷ ಅಧಿವೇಶನವನ್ನು ಕರೆಯಲು ಏಪ್ರಿಲ್ 28 ರಂದು ಬರೆದ ನಮ್ಮ ಪತ್ರಗಳನ್ನು ನೀವು ನೆನಪಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

    ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಹಲ್ಗಾಮ್ ಭಯೋತ್ಪಾದನೆ, ಆಪರೇಷನ್ ಸಿಂಧೂರ ಮತ್ತು ಮೊದಲು ವಾಷಿಂಗ್ಟನ್ ಡಿಸಿಯಿಂದ, ನಂತರ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಂದ ಕದನ ವಿರಾಮ ಘೋಷಣೆಗಳ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಎಲ್ಲಾ ವಿರೋಧ ಪಕ್ಷಗಳ ಸರ್ವಾನುಮತದಿಂದ ವಿನಂತಿಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕರು ಈಗಾಗಲೇ ನಿಮಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ನಾನು ಈ ವಿನಂತಿಯನ್ನು ಬೆಂಬಲಿಸಿ ಬರೆಯುತ್ತಿದ್ದೇನೆ. ನೀವು ಒಪ್ಪುತ್ತೀರಿ ಎಂದು ನಾನು ನಂಬುತ್ತೇನೆ ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    Post Views: 8

    Demo
    Share. Facebook Twitter LinkedIn Email WhatsApp

    Related Posts

    ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಬಗ್ಗೆ ಸಂದೇಹವಿದ್ದರೆ ಪಾಕಿಸ್ತಾನವನ್ನೇ ಕೇಳಿ: ಯೋಗಿ ಆದಿತ್ಯನಾಥ್

    May 11, 2025

    ಭಾರತದ ವಿರೋಧಿಗಳಿಗೆ ಬ್ರಹ್ಮೋಸ್ ಕ್ಷಿಪಣಿ ಸ್ಪಷ್ಟ ಸಂದೇಶ ಕೊಟ್ಟಿದೆ: ಸಚಿವ ರಾಜನಾಥ್ ಸಿಂಗ್

    May 11, 2025

    Smriti Mandhana: ಭಾರತೀಯ ಸೈನಿಕರ ಬಗ್ಗೆ ಭಾವನಾತ್ಮಕ ಟ್ವೀಟ್ ಮಾಡಿದ ಲೇಡಿ ಕೊಹ್ಲಿ..!

    May 11, 2025

    Pulwama Attack: ಪುಲ್ವಾಮಾ ದಾಳಿ ಮಾಡಿಸಿದ್ದು ನಾವೇ: 6 ವರ್ಷಗಳ ಬಳಿಕ ಒಪ್ಪಿಕೊಂಡ ಪಾಪಿ ಪಾಕ್.!

    May 11, 2025

    Operation Sindoor: ‘ಆಪರೇಷನ್ ಸಿಂಧೂರ’ ಸಿನಿಮಾ ಪೋಸ್ಟರ್ ರಿಲೀಸ್: ಕ್ಷಮೆ ಕೇಳಿದ ನಿರ್ದೇಶಕ..! ಯಾಕೆ ಗೊತ್ತಾ..?

    May 11, 2025

    Gold Rate Today: ಅಪರಂಜಿ ಚಿನ್ನದ ಬೆಲೆ ಮತ್ತೆ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಇಲ್ಲಿದೆ

    May 11, 2025

    ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ: ಗಡಿಭಾಗಗಳಲ್ಲಿ ಡ್ರೋನ್‌-ಶೆಲ್‌ʼಗಳಿಂದ ದಾಳಿ!

    May 11, 2025

    IPL 2025: ದೇಶದಲ್ಲಿ ನಾವು ಶಾಂತಿಯಿಂದ ಇರುವುದಕ್ಕೆ ಯೋಧರ ತ್ಯಾಗವೇ ಕಾರಣ: ಸೌರವ್ ಗಂಗೂಲಿ

    May 11, 2025

    ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು: ಇಲ್ಲಿದೆ ಚಾರ್ಜ್ ಮಾಡದೆ 50 ವರ್ಷಗಳ ಕಾಲ ಕೆಲಸ ಮಾಡುವ ಬ್ಯಾಟರಿ!

    May 11, 2025

    India-Pakistan: ಇಂದು ಸಂಜೆ 5 ಗಂಟೆಯಿಂದಲೇ ಕದಮ ವಿರಾಮಕ್ಕೆ 2 ರಾಷ್ಟ್ರಗಳು ಘೋಷಣೆ..!

    May 10, 2025

    ಭಾರತ-ಪಾಕ್‌ ಕದನಕ್ಕೆ ವಿರಾಮ: ಉಭಯ ರಾಷ್ಟ್ರಗಳ ಸಮ್ಮತಿ – ಟ್ರಂಪ್‌ ಘೋಷಣೆ

    May 10, 2025

    India Pakistan War: ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಅಧಿಕೃತ ವಿಡಿಯೋ ಬಿಡುಗಡೆ ಮಾಡಿದ ಸೇನೆ!

    May 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.