ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹೆಚ್ಚಾದ ಹಿನ್ನಲೆ ದೊಡ್ಡಬಳ್ಳಾಪುರ ಉಪ ವಿಭಾಗದ ರೌಡಿ ಪೆರೇಡ್ ಮಾಡಿಸಿ 248 ಕ್ಕೂ ಹೆಚ್ಚು ರೌಡಿ ಶೀಟರ್ಗಳಿಗೆ ಸಜ್ಜನರಾಗಿ ಬದುಕುವಂತೆ ಎಚ್ಚರಿಕೆ ನೀಡಿದರು. ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣೆಯ ಬಳಿ ಎಎಸ್ಪಿ ನಾಗರಾಜ್ ನೇತೃತ್ವದಲ್ಲಿ ಪೆರೇಡ್ ನಡೆದಿದ್ದು, ಪೆರೇಡ್ ನಲ್ಲಿ 8 ಪೋಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಗಳು ಭಾಗಿಯಾಗಿದ್ದರು.
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
10 ವರ್ಷದಿಂದ ಯಾವುದೇ ಕೃತ್ಯದಲ್ಲಿ ಭಾಗಿಯಾಗದೇ ಇರುವವರನ್ನು ರೌಡಿ ಶೀಟರ್ ನಿಂದ ಬಿಡುಗಡೆ ಮಾಡುವ ಆಶ್ವಾಸನೆ ನೀಡಿದರು. 25 ಜನ ಕೊಲೆ ಆರೋಪದಲ್ಲಿ ಭಾಗಿಯಾಗಿದ್ದ ರೌಡಿ ಶೀಟರ್ ಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತದೆ. , ಯಾವುದೇ ಅಕ್ರಮದಲ್ಲಿ ಭಾಗಿಯಾದರೆ, ಕಲಹಗಳಲ್ಲಿ ಪಾಲ್ಗೊಂಡರೆ, ಡಾನ್ ಗಳ ಹಾಗೆ ಮಧ್ಯಸ್ಥಿಕೆ ವಹಿಸಿ ಜಗಳಗಳನ್ನು ಬಿಡಿಸಲು ಹೋದರೆ ತಕ್ಕ ಶಾಸ್ತಿ ಮಾಡಲಾಗುವುದು ಮಾಡಲಾಗುವುದು ಎಂದು ಎಎಸ್ಪಿ ನಾಗರಾಜ್ ಎಚ್ಚರಿಕೆ ನೀಡಿದರು.