ಕೋಲಾರ: ರೌಡಿಶೀಟರ್ ಗಳಿಗೆ ಮಧ್ಯರಾತ್ರಿ ಕೋಲಾರ ಜಿಲ್ಲೆ ಮಾಲೂರು ಪೊಲೀಸರು ಶಾಕ್ ನೀಡಿದ್ದು, ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಮಾಲೂರು ಸಿಪಿಐ ವಸಂತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ರೌಡಿಶೀಟರ್ ಮನೆಗಳಿಗೆ ಎಂಟ್ರಿ ಕೊಟ್ಟು ಮನೆ ತಪಾಸಣೆ ಮಾಡಿದ್ದಾರೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಆರು ಪ್ರತ್ಯೇಕ ಟೀಂಗಳನ್ನು ಮಾಡಿ ಸುಮಾರು 44 ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳಿಗೆ ಎಂಟ್ರಿ ಕೊಟ್ಟಿದ್ದಾರೆ.
ಅಪರಾಧ ಕೃತ್ಯಗಳಲ್ಲಿ ಬಾಗಿಯಾಗದಂತೆ ಹಾಗೂ ಅಪರಾಧ ಪ್ರಕರಣಗಳಿಂದ ದೂರ ಉಳಿದರೆ ರೌಡಿಶೀಟರ್ ಕ್ಲೋಸ್ ಆಗುತ್ತದೆ, ಅಪರಾಧ ಪ್ರಕರಣಗಳಲ್ಲಿ ಪದೇ ಪದೇ ಬಾಗಿಯಾದರೆ ಗೂಂಡಾ ಆಕ್ಟ್ ನಡಿ ಗಡಿಪಾರು ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.