ಮಂಗಳೂರು: ಕಾಮಿಡಿ ಕಿಲಾಡಿಗಳು ಸೀಸನ್- 3ರಲ್ಲಿ ಅದ್ಭುತ ಅಭಿನಯದಿಂದ ಮನರಂಜನೆ ನೀಡಿದ್ದ ಹಾಸ್ಯ ನಟ ರಾಕೇಶ್ ಪೂಜಾರಿ ಹೃದಯಘಾತದಿಂದ ನಿಧನರಾಗಿದ್ದಾರೆ. ಉಡುಪಿಯ ನಿಟ್ಟೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಇಹಲೋಕ ತ್ಯಜಿಸಿದ್ದಾರೆ.
ದಿನಕರ್ ಪೂಜಾರಿ ಹಾಗು ಶಾಂಭವಿ ದಂಪತಿಯ ಮಗನಾಗಿದ್ದ ರಾಕೇಶ್ ಅವರಿಗೆ 34 ವರ್ಷ ವಯಸ್ಸಾಗಿತ್ತು. ರಾಕೇಶ್ ಪೂಜಾರಿ ಸಾವಿನ ಸುದ್ದಿ ಕೇಳಿ ಆಘಾತಗೊಂಡಿರುವ ಕಿರುತೆರೆ ಹಾಗು ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇನ್ನೂ ರಾಕೇಶ್ ಪೂಜಾರಿ ಸಾವಿಗೂ ಮುನ್ನ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿರೋ ವಿಡಿಯೋ ಲಭ್ಯವಾಗಿದೆ. ಗೆಳೆಯರ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದರು.
ಮಧ್ಯ ರಾತ್ರಿವರೆಗೂ ಅವರು ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು. ದಿಢೀರ್ ಭೇಟಿ ನೀಡಿ ಸಂತಸದಲ್ಲಿದ್ದ ರಾಕೇಶ್ ಸಾವು ಕಂಡು ಸ್ನೇಹಿತರು ದಿಗ್ಭ್ರಮೆಗೆ ಒಳಗಾಗಿದ್ದಾರೆ. ಡ್ಯಾನ್ಸ್ ಮಾಡೋ ವೇಳೆ ಅವರು ಎದೆ ಹಿಡಿದುಕೊಂಡಿರೋದು ಕಂಡು ಬಂದಿದೆ.
Rakesh