ಕೋಲಾರ: ರಾಜ್ಯದಲ್ಲಿ ಬಿರುಬೇಸಿಗೆ ನಡುವೆಯೋ ಹಲವು ತರಕಾರಿಗಳ ಬೆಲೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಎಲೆಕೋಸಿಗೆ ತೀವ್ರ ಬೆಲೆ ಕುಸಿತಗೊಂಡಿದೆ. ಬಿತ್ತನೆ ಬೀಜದ ಬೆಲೆಯೂ ರೈತರ ಕೈಗೆ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದಲ್ಲಿ ಈ ದೃಷ್ಯಗಳು ಸಾಮಾನ್ಯವಾಗಿವೆ. ರೈತ ಚಂದ್ರಶೇಖರ್ ಮೂರು ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಎಲೆಕೋದು ಬೆಳೆದಿದ್ದ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹಿನ್ನೆಲೆ ಕೇಳುವವರಿಲ್ಲದೆ ತೋಟದಲ್ಲೇ ಕೊಳೆಯುತ್ತಿದೆ. ಹೀಗಾಗಿ ಬೇರೆ ದಾರಿಯಿಲ್ಲದ ಎಲೆಕೋಸು ಬೆಳೆಯನ್ನು ದನಕರುಗಳಿಗೆ ಮೇಯಲು ಬಿಟ್ಟು ರೈತ ನಾಶಪಡಿಸಿ ಹತಾಶನಾಗಿದ್ದಾನೆ. ಹೀಗಾಗಿ ಸರ್ಕಾರ ರೈತರ ನೆರವಿಗೆ ಬರುವಂತೆ ರೈತರು ಮನವಿ ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಹೃದಯಘಾತರಿಂದ ನಿಧನ