ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಬಳಿಯ ಗುರುಸಿದ್ದೇಶ್ವರ ನಗರದಲ್ಲಿ ಇಬ್ಬರು ಬಾಲಕರ ನಡುವೆ ಜಗಳ ಏರ್ಪಟ್ಟಿದ್ದು, ಕೋಪಗೊಂಡ 15 ವರ್ಷದ ಬಾಲಕ, 14 ವರ್ಷದ ಚೇತನ ರಕ್ಕಸಗಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.
ತಡರಾತ್ರಿ ಘಟನೆ ನಡೆದಿದ್ದು, ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಬಾಲಕರು ಮೂರುಸಾವಿರ ಮಠದ ಬಳಿಯ ಜಿ ಅಡ್ಡಾ ನಿವಾಸಿಗಳು. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಯಾವ ಕಾರಣಕ್ಕಾಗಿ ಬಾಲಕರ ನಡುವೆ ಜಗಳ ಏರ್ಪಟ್ಟಿದೆ ಎಂದು ತಿಳಿದಿಲ್ಲ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದಾಗ, 15 ವರ್ಷದ ಬಾಲಕ ಮನೆಗೆ ಹೋಗಿ ರೇಡಿಯಂ ಕಟ್ ಮಾಡುವ ಚಾಕು ತಂದು, ಚೇತನಗೆ ಇರಿದಿದ್ದಾನೆ. ತೀವ್ರ ಗಾಯಗೊಂಡ ಚೇತನನ್ನು ಕೆಎಂಸಿ-ಆರ್‌ಐ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು. ಈ
ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ‘ಇಬ್ಬರು ಬಾಲಕರು ಎದುರು-ಬದುರು ಮನೆಯವರಾಗಿದ್ದು, ಜೊತೆಯಲ್ಲಿಯೇ ಆಡುತ್ತಿದ್ದರು. ಇಬ್ಬರ ನಡುವೆ ಏರ್ಪಟ್ಟ ಕ್ಷುಲ್ಲಕ ಜಗಳವು, ಮತ್ತೊಂದು ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ.
ಚಾಕು ಇರಿದ ಬಾಲಕನ ತಾಯಿ, ಚಾಕು ಇರಿತಕ್ಕೆ ಒಳಗಾದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವ ಪ್ರಮಾಣದಲ್ಲಿ ಗಾಯಗಳಾಗಿವೆ, ಅವುಗಳ ತೀವ್ರತೆ ಎಷ್ಟಿತ್ತು ಎನ್ನುವುದು ತಿಳಿದು ಬಂದಿಲ್ಲ. ಆದರೆ, ಕೆಎಂಸಿ–ಆರ್‌ಐ ಆಸ್ಪತ್ರೆಗೆ ತರುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಹೇಳಿದರು.
ನೋಡಿಲ್ಲ. ನಮ್ಮ ಸೊಂಟದ ಎತ್ತರಕ್ಕೂ ಬೆಳೆಯದ ಮಗು, ಚಾಕು ಹಿಡಿದು ಕೊಲೆ ಮಾಡುವಂಥ ಮನಸ್ಥಿತಿಗೆ ಬಂದಿದೆ ಎಂದರೆ, ಪೋಷಕರು ಎಚ್ಚರ ವಹಿಸಬೇಕು. ಕೊಲೆಯಾದ ಬಾಲಕನ ತಂದೆ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕೊಲೆ ಮಾಡಿದ ಬಾಲಕನದ್ದು ಸಹ ಬಡ ಕುಟುಂಬವಾಗಿದೆ’ ಎಂದರು.
‘ಮಾರುಕಟ್ಟೆಗೆ ಹೋದಾಗ, ಮಗನನ್ನು ಕೊಲೆ ಮಾಡಲಾಗಿದೆ ಎನ್ನುವ ಸುದ್ದಿ ತಿಳಿಯಿತು. ಇಬ್ಬರು ಒಂದೇ ಓಣಿಯಲ್ಲಿ ಆಡುವ ಮಕ್ಕಳು ಅವರು. ಆಡುವಾಗ ಏನಾಯಿತೋ ಗೊತ್ತಿಲ್ಲ. ಎದುರು ಮನೆಯ ಹುಡುಗನೇ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದರು’ ಎಂದು ಮೃತ ಬಾಲಕ ತಂದೆ ಸೋಮಶೇಖರ್ ಕಣ್ಣೀರಾದರು.